ಭೀಕರ ಅಪಘಾತ: ಸರ್ಕಾರಿ ಅಧಿಕಾರಿಗಳಿಬ್ಬರು ಸೇರಿ ನಾಲ್ವರ ದುರ್ಮರಣ

accident
Published on

ವಿಜಯನಗರ: ಹೊಸಪೇಟೆ ತಾಲೂಕಿನ ಮರಿಯಮ್ಮಹಳ್ಳಿ ಸಮೀಪದ ಹಾರುವನಹಳ್ಳಿಯಲ್ಲಿ ಇಂದು (ಗುರುವಾರ) ಎರಡು ಇನ್ನೋವಾ ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಸರ್ಕಾರಿ ಅಧಿಕಾರಿಗಳು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.

ಅಪಘಾತಕ್ಕೆ ಒಳಗಾಗಿದ್ದು ಒಂದು ಸರ್ಕಾರಿ ಕಾರು, ಇನ್ನೊಂದು ಖಾಸಗಿ ಕಾರು. ಇವೆರಡೂ ಮುಖಾಮುಖಿ ಡಿಕ್ಕಿಯಾಗಿದ್ದು, ಸರ್ಕಾರಿ ಕಾರಿನಲ್ಲಿದ್ದ ಕೃಷ್ಣ ಜಲಭಾಗ್ಯ ನಿಗಮ ಮಂಡಳಿ ಅಧಿಕಾರಿಗಳಾದ ಕೋದಂಡ ರಾಮಸ್ವಾಮಿ(55) ಮತ್ತು ಜಿತೇಂದ್ರ ಪನ್ವರ್(50), ಖಾಸಗಿ ಕಾರಿನಲ್ಲಿದ್ದ ಕಾವ್ಯ(35) ಮತ್ತು ಶರಣಬಸವ(10) ದುರ್ಮರಣಕ್ಕೀಡಾಗಿದ್ದಾರೆ. 8 ಜನರ ಸ್ಥಿತಿ ಗಂಭೀರವಾಗಿದೆ.

ತಿಪಟೂರಿನಿಂದ ಕುಷ್ಟಗಿಯತ್ತ ಹೊರಟಿದ್ದ ಖಾಸಗಿ ಕಾರಿನ ಟೈಯರ್​ ಹಾರುವನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ಲಾಸ್ಟ್ ಆಗಿದೆ. ಪರಿಣಾರ ಹೆದ್ದಾರಿ ಡಿವೈಡರ್ ಮೇಲೆ ಹಾರಿದ ಈ ಕಾರು ಹೊಸಪೇಟೆ ಕಡೆಯಿಂದ ಬೆಂಗಳೂರಿಗೆ ಹೊರಟಿದ್ದ ಸರ್ಕಾರಿ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದೆ. ಮರಿಯಮ್ಮನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎರಡೂ ಕಾರು ನಜ್ಜುಗುಜ್ಜಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net