

ಶ್ರೀ ರಾಮಾಭ್ಯುದಯ ಸಭಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಜೂ.15 ರಂದು ಸಂಜೆ 6 ಗಂಟೆಗೆ ಶಿವರಾಂಪೇಟೆಯ ರಾಮಮಂದಿರದ ಆವರಣದಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ವಿದ್ವಾನ್ ಎನ್.ಎಚ್.ಶ್ರೀಹರಿ ಭಟ್ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಇವರಿಗೆ ವಿದುಷಿ ಪೃಥ್ವಿ ಭಾಸ್ಕರ್(ಪಿಟೀಲು), ವಿದ್ವಾನ್ ನಂದನ್ ಕಶ್ಯಪ್( ಮೃದಂಗ) ಸಾಥ್ ನೀಡಲಿದ್ದಾರೆ.