ಮಾನಸಿಕ ಅಸ್ವಸ್ಥನಿಗೆ ಆರೈಕೆ

13ald 1
ಆಲ್ದೂರಿನಲ್ಲಿ ಅನಾಥವಾಗಿ ಓಡಾಡುತ್ತಿದ್ದ ಮಾನಸಿಕ ಅಸ್ವಸ್ಥನನ್ನು ಮಾನಸಿಕ ಅಸ್ವಸ್ಥರ ಚಿಕಿತ್ಸಾ ಕೇಂದ್ರಕ್ಕೆ ಮೂಡಿಗೆರೆಯ ಸಮಾಜ ಸಕ್ರಿಯ ಸೇವಾ ಸಂಸ್ಥೆ ಮೂಲಕ ದಾಖಲಿಸಿದ ಬದ್ರುದ್ದಿನ್, ಇಬ್ರಾಹಿಂ ಅಶೋಕ್, ಚಂದ್ರು, ಗಿರೀಶ್ ಮತ್ತಿತರರು.
Published on

ಆಲ್ದೂರು: ಪಟ್ಟಣದಲ್ಲಿ ಹಲವು ದಿನಗಳಿಂದ ಅನಾಥವಾಗಿ ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥನನ್ನು ತುಮಕೂರಿನ ಶಾರದಾ ಟ್ರಸ್ಟ್ ನಡೆಸುತ್ತಿರುವ ಮಾನಸಿಕ ಅಸ್ವಸ್ಥರ ಚಿಕಿತ್ಸಾ ಕೇಂದ್ರಕ್ಕೆ ಮೂಡಿಗೆರೆಯ ಸಮಾಜ ಸಕ್ರಿಯ ಸೇವಾ ಸಂಸ್ಥೆ ಮೂಲಕ ದಾಖಲಿಸಿ ಪಟ್ಟಣದ ಯುವಕರು ಮಾನವೀಯತೆ ಮೆರೆದಿದ್ದಾರೆ.

ಕಳೆದ 3 ತಿಂಗಳಿನಿಂದ ಮಾನಸಿಕ ಅಸ್ವಸ್ಥನೋರ್ವ ರಸ್ತೆಯಲ್ಲಿ ಕಿರುಚಾಡುತ್ತ, ಕಸದ ಚೀಲವನ್ನು ರಸ್ತೆಯಲ್ಲಿ ಎಳೆದುಕೊಂಡು ಜನರಿಗೆ ಭಯ ಹುಟ್ಟಿಸುವಂತೆ ವರ್ತಿಸುತ್ತಿದ್ದ. ಮಹಿಳೆಯರ ಜೊತೆಯೂ ಗಲಾಟೆ ಮಾಡುತ್ತಿದ್ದ, ತಡೆಯಲು ಹೋದ ವ್ಯಕ್ತಿಗಳ ಮೇಲೂ ಹಲ್ಲೆ ಮಾಡಿದ್ದ. ರಸ್ತೆ ಬದಿಯ ಕಸಕ್ಕೆ ಬೆಂಕಿ ಹಚ್ಚಿ ಚೀಲದಲ್ಲಿ ತುಂಬಿಡುತ್ತಿದ್ದ ಕಸವನ್ನು ರಸ್ತೆಯ ಮೇಲೆ ಎಳೆದಾಡಿ ರಂಪಾಟ ಮಾಡುತ್ತಿದ್ದ.
ಪಟ್ಟಣದಲ್ಲಿ ಇವನಿಂದ ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದ ಜನ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಮಾನಸಿಕ ಅಸ್ವಸ್ಥನನ್ನು ಹೆದರಿಸಿದರೂ ಅವನು ರಂಪಾಟ ಮಾಡುವುದು ಬಿಟ್ಟಿರಲಿಲ್ಲ.
ಆಲ್ದೂರಿನ ಬದ್ರುದ್ದೀನ್, ಇಬ್ರಾಹಿಂ ಎಂಬುವರು ಮೂಡಿಗೆರೆಯ ಸಮಾಜ ಸಕ್ರಿಯ ಸೇವಾ ಸಂಸ್ಥೆಯ ಫಿಶ್ ಮೋಣು , ಅಬ್ದುಲ್ ರೆಹಮಾನ್ ಅವರನ್ನು ಸಂಪರ್ಕಿಸಿ ಮಾನಸಿಕ ಅಸ್ವಸ್ಥನನ್ನು ಶುಚಿಗೊಳಿಸಿ ಸೇವಾ ಸಂಸ್ಥೆ ಮೂಲಕ ಮಾನಸಿಕ ಅಸ್ವಸ್ಥರ ಚಿಕಿತ್ಸಾ ಕೇಂದ್ರಕ್ಕೆ ಆಂಬುಲೆನ್ಸ್ ಮೂಲಕ ಕಳುಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net