ನಗರಮಧ್ಯೆ ಕಾರು ಟೈರ್ ಪಂಕ್ಚರ್: ದಲಿಸಿಕೊಟ್ಟು ಮಹಿಳೆಗೆ ನೆರವಾದ ಪೊಲೀಸರು

car
Published on

ಮಂಗಳೂರು: ನಗರ ಮಧ್ಯೆ ಮಹಿಳೆ ಮತ್ತು ಮಗು ಮಾತ್ರವೇ ಇದ್ದ ಕಾರಿನ ಟೈರ್ ಪಂಕ್ಚರ್ ಆಗಿದ್ದು, ಇದನ್ನು ಗಮನಿಸಿದ ಮಂಗಳೂರು ದಕ್ಷಿಣ ಸಂಚಾರ(ನಾಗುರಿ) ಠಾಣಾ ಪೊಲೀಸರು ಟೈರ್ ಬದಲಿಸಿಕೊಟ್ಟು ಮಾನವೀಯತೆ ಮೆರೆದರು.

ಭಾನುವಾರ ಸಾಯಂಕಾಲ 7ರ ಸುಮಾರಿಗೆ ಕುಂದಾಪುರ ಮೂಲದ ಮಹಿಳೆ ನಾಗುರಿಯಿಂದ ಮಂಗಳೂರು ಕಡೆಗೆ ಎಳೆಯ ಮಗುವಿನ ಜತೆಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ಸಂದರ್ಭ ಪಂಪ್‌ವೆಲ್ ಸಮೀಪ ಟೈರ್ ಪಂಕ್ಚರ್ ಆಗಿತ್ತು. ಇದೇ ಸಂದರ್ಭ ಹೈವೇ ಪ್ಯಾಟ್ರೋಲ್ ಪೊಲೀಸರು ಸ್ಥಳದಲ್ಲಿದ್ದರು. ಮಹಿಳೆಯ ಅಸಹಾಯಕತೆ ಗಮನಿಸಿದ ಸಂಚಾರಿ ಪೊಲೀಸರು ತಕ್ಷಣ ಕಾರಿನತ್ತ ಧಾವಿಸಿ ಟೈರ್ ಬದಲಿಸಿಕೊಟ್ಟು ಮಾನವೀಯತೆ ಮೆರೆದರು. ಸಂಚಾರ ಠಾಣೆ ಎಎಸ್‌ಐ ಅಲ್ಬರ್ಟ್ ಲಸ್ರಾದೋ, ಸಿಬ್ಬಂದಿ ಮಹೇಶ್ ಹಾಗೂ ಹೋಂಗಾರ್ಡ್ ಆಸೀಫ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net