

ಮಾಲಿನ್ಯ ನಿಯಂತ್ರಿಸಲು ಇರಾನ್ ಸರ್ಕಾರ ಹೊಸ ಯೋಜನೆ ರೂಪಿಸಿದೆ. ಅದೇನೆಂದರೆ, ವಾಹನದ ಕೊನೆಯ ಸಂಖ್ಯೆ ಸಮವಾಗಿದ್ದರೆ (0,2,4,6,8) ಅಂಥ ವಾಹನಗಳು ಒಂದು ದಿನ ಬೀದಿಗಿಳಿದರೆ, ಇನ್ನೊಂದು ದಿನ ಬೆಸ ಸಂಖ್ಯೆಯಿಂದ ಕೊನೆಗೊಳ್ಳುವ (1,3,5,7,9) ನಂಬರ್ ಪ್ಲೇಟ್ನ ವಾಹನವನ್ನು ಬೀದಿಗೆ ತರಬೇಕು ಎಂದು.
ದೆಹಲಿಯಲ್ಲಿಯೂ ಮುಖ್ಯಮಂತ್ರಿ ಕೇಜ್ರಿವಾಲ್ ಇಂಥದ್ದೇ ಯೋಜನೆ ರೂಪಿಸಿದ್ದರಲ್ಲ, ಇರಾನ್ನದ್ದೇನು ವಿಶೇಷ ಅಂತೀರಾ? ಬುದ್ಧಿವಂತ ಇರಾನಿನ ಕಾರು ಮಾಲೀಕರು ಒಂದು ಹೆಜ್ಜೆ ಮುಂದಕ್ಕೆ ಯೋಚಿಸಿ ತಮ್ಮ ಕಾರನ್ನು ದಿನವೂ ರಸ್ತೆಗಿಳಿಸಲು ‘ಕಾರ್ ಪ್ಲೇಟ್ ಬ್ಲಾಕರ್’ಗಳನ್ನು ನೇಮಿಸಿಕೊಳ್ಳುತ್ತಿದ್ದಾರೆ.
ಇವರ ಕೆಲಸ ಎಂದರೆ ಸಿಸಿಟಿವಿಗೆ ಕಾರಿನ ನಂಬರ್ ಪ್ಲೇಟ್ ಕಾಣಿಸದಂತೆ ಕಾರಿನ ಹಿಂದೆ ಓಡಬೇಕು. ಇವರಿಗೆ ಅತ್ಯುತ್ತಮ ಸಂಬಳವೂ ಇದ್ದು, ಈ ಉದ್ಯೋಗವೀಗ ಭಾರಿ ಬೇಡಿಕೆ ಕುದುರಿಸಿಕೊಳ್ಳುತ್ತಿದೆ!