

Flyover: ಫ್ಲೈಓವರ್ನಿಂದ ಏಕಾಏಕಿ ಕೆಳಗೆ ಹಾರಿದ ಕಾರಿನ ಆಪಘಾತದ ವೇಳೆ ಮೇಲಿಂದ ಬಿದ್ದ ಸೈನ್ನ್ಬೋರ್ಡ್(ಸಿಗ್ನಲ್ ಬೋರ್ಡ್)ನಿಂದ ಯುವತಿಯೊಬ್ಬಳು ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾದ ಹೃದಯವಿದ್ರಾವಕ ಕ್ಷಣದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಇಲ್ಲಿದೆ ನೋಡಿ ವಿಡಿಯೋ
ಕೆಂಪು ಬಣ್ಣದ ಕಾರು ಫ್ಲೈಓವರ್‌ನಲ್ಲಿ ಹೋಗುತ್ತಿದ್ದು ನಿಯಂತ್ರಣ ತಪ್ಪಿ ಏಕಾಏಕಿಯಾಗಿ ಕೆಳಗೆ ನೆಲಕ್ಕೆ ಬಿದ್ದಿದೆ. ಆ ಸದ್ದಿಗೆ ರೋಡಿನಲ್ಲಿ ಓಡಾಡುತ್ತಿರುವ ಮಹಿಳೆಯೊಬ್ಬಳು ಹೆದರಿ ಹಿಂದಕ್ಕೆ ಓಡಿ ಕತ್ತೆತ್ತಿ ಮೇಲೆ ನೋಡುತ್ತಾಳೆ. ಆಗ ದೊಡ್ಡ ಸೈನ್‌ಬೋರ್ಡ್ ಮೇಲಿನಿಂದ ಕೆಳಗೆ ಬೀಳುತ್ತದೆ. ಕೂದಲೆಳೆ ಅಂತರದಲ್ಲಿ ಅದು ಕೆಲವೇ ಕ್ಷಣಗಳ ಹಿಂದೆ ಅವಳು ನಿಂತಿದ್ದ ಸ್ಥಳಕ್ಕೆ ಅಪ್ಪಳಿಸುತ್ತದೆ.
ಅನೇಕ ನೆಟ್ಟಿಗರು ಈ ವಿಡಿಯೋ ನೋಡಿ "ಪವಾಡ" ಎಂದು ಕರೆದಿದ್ದಾರೆ. ಈ ಘಟನೆಯ ವಿಡಿಯೋ ಈಗಾಗಲೇ ಇನ್‌ಸ್ಟಾಗ್ರಾಮ್‌ನಲ್ಲಿ 2.6 ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಮತ್ತು ಬಳಕೆದಾರರಿಂದ ಕಾಮೆಂಟ್ಗಳ ಅಲೆಯನ್ನೇ ಹುಟ್ಟಿಸಿದ್ದಾರೆ. "ಹುಡುಗಿ ಕೇವಲ ಒಂದು ಸೆಕೆಂಡ್‌ನಲ್ಲಿ ಬದುಕುಳಿದರು" ಎಂದು ಒಬ್ಬ ಬಳಕೆದಾರ ಹೇಳದರೆ, ಮತ್ತೊಬ್ಬರು ಅಪನಂಬಿಕೆ ವ್ಯಕ್ತಪಡಿಸುತ್ತಾ, "ನಾನು ಈ ವೀಡಿಯೊವನ್ನು ನೋಡದಿದ್ದರೆ, ನಾನು ಹುಡುಗಿಯ ಮಾತುಗಳನ್ನು ನಂಬುತ್ತಿರಲಿಲ್ಲ" ಎಂದು ಬರೆದಿದ್ದಾರೆ.
"ನಾವು ಭಾರತೀಯರು ಹಾರುವ ಕಾರುಗಳಿಗಾಗಿ ಚೀನಾದೊಂದಿಗೆ ಸ್ಪರ್ಧೆಯನ್ನು ತಪ್ಪು ರೀತಿಯಲ್ಲಿ ತೆಗೆದುಕೊಂಡಿದ್ದೇವೆ" ಒಬ್ಬ ನೆಟ್ಟಿಗನ ಹಾಸ್ಯಮಯ ಹೇಳಿಕೆಯೂ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದೆ. ಕೆಲವರು ಹುಡುಗಿಯ ತಕ್ಷಣದ ಚಿಂತನೆಯನ್ನು ಶ್ಲಾಘಿಸಿದ್ದಾರೆ, "ದೇವರು ಈ ಹುಡುಗಿಯ ಮೇಲೆ ಕರುಣೆ ತೋರಿಸಿದನು. ಅದೃಷ್ಟವಶಾತ್, ಅವಳು ಬದುಕುಳಿದಳು" ಎಂದು ಒಬ್ಬ ನೆಟ್ಟಿಗೆ ಹೇಳಿದ್ದಾನೆ.(ಏಜೆನ್ಸೀಸ್)