

Car crashes: ಛತ್ತಿಸ್ಘಡದ ರಾಯ್‌ಪುರದಲ್ಲಿ ಗುರುವಾರ ಸಂಜೆ(ಫೆ.06) ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಐವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇಲ್ಲಿನ ಮಂದಿರ ಹಸೌದ್ ಪೊಲೀಸ್ ಠಾಣೆ ವ್ಯಾಪ್ತಿಯ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅರಾಂಗ್ ಕಡೆ ತೆರಳುತ್ತಿದ್ದ ಕಾರು ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರಲ್ಲಿ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವಾಗ ಅಸುನಿಗಿದ್ದಾರೆ ಎಂದು ರಾಯ್‌ಪುರ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಡಾ ಲಾಲ್ ಉಮೇದ್ ಸಿಂಗ್ ದೃಢಪಡಿಸಿದ್ದಾರೆ ವರದಿ ಉಲ್ಲೇಖಿಸಿದೆ. (ಏಜೆನ್ಸೀಸ್)