

ಮಂಗಳವಾರ ಕಾರು ಅಪಘಾತದಲ್ಲಿ ಮೃತರಾದ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ರಿಯಾಲಿಟಿ ಶೋನ ಸೀಸನ್ 4ರ ವಿಜೇತೆ ಮಬೀನಾ ಮೈಕೆಲ್, ಟಿಕ್ಟಾಕ್ನಲ್ಲಿ 2.5 ಲಕ್ಷಕ್ಕೂ ಅಧಿಕ ಫ್ಯಾನ್ಸ್ ಹೊಂದಿದ್ದರು. ಸಾಕಷ್ಟು ವಿಡಿಯೋಗಳನ್ನು ಸಹ ಅಪ್ಲೋಡ್ ಮಾಡಿದ್ದರು. ಅವರು ಕೊನೆಯದಾಗಿ ಪೊಗರು ಚಿತ್ರದ ಖರಾಬು ಹಾಡಿಗೆ ಹೆಜ್ಜೆ ಹಾಕಿದ್ದರು. ಅದರೊಂದಿಗೆ ಮತ್ತೆರಡು ವಿಡಿಯೋಗಳನ್ನು ಸಾವಿಗೂ ಮೂರು ದಿನದ ಮುಂಚೆ ಪೋಸ್ಟ್ ಮಾಡಿದ್ದರು. ಟಿಕ್ಟಾಕ್ ವಿಡಿಯೋ ವೈರಲ್ ಆಗಿದ್ದು, ಫ್ಯಾನ್ಸ್ಗಳು ಸಂತಾಪ ಸೂಚಿಸಿದ್ದಾರೆ.