ಮುಳುವಾಯ್ತು ಅತಿಯಾದ ವೇಗ... ಒಂದೇ ಕುಟುಂಬದ ಐವರ ದುರಂತ ಅಂತ್ಯ

pic acc
Published on

ಹೈದ್ರಾಬಾದ್: ಭೀಕರ ರಸ್ತೆ ಅಪಘಾತದಲ್ಲಿ ತಂದೆ- ತಾಯಿ, ಮಗು ಸೇರಿದಂತೆ ಐವರು ಸಾವನ್ನಪ್ಪಿರುವ ಘಟನೆ ಸಂಗಾರೆಡ್ಡಿ ಜಿಲ್ಲೆಯ ಅಕೋಲ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಮೃತರನ್ನು ವಿವೇಕ್ (06), ಪೋಷಕರಾದ ಅಂಬಾದಾಸ್ ಮತ್ತು ಪದ್ಮ ಎಂದು ಗುರುತಿಸಲಾಗಿದ್ದು, ಉಳಿದಿಬ್ಬರು ಸಂಬಂಧಿಕರೆಂದು ತಿಳಿದು ಬಂದಿದೆ. ಮೇದಕ್​ ಜಿಲ್ಲೆಯ ಕುಲ್ಚಾರಾಮ್ ನಗರದ ಕುಟುಂಬವೊಂದು, ತಮ್ಮ ಮಗುವಿನ ಆರೋಗ್ಯ ತಪಾಸಣೆ ನಡೆಸಿ ರಂಗಾರೆಡ್ಡಿಯಿಂದ ವಾಪಸ್ ಬರುತ್ತಿದ್ದರು. ಈ ವೇಳೆ ಕಾರಿನ ಚಾಲಕ ಓವರ್ ಟೇಕ್ ಮಾಡುವ ಭರದಲ್ಲಿ ಎದುರಿಗೆ ಬರುತ್ತಿದ್ದ ಟ್ರಕ್​​ಗೆ ಗುದ್ದಿದ್ದಾನೆ.

ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಸಂಗಾರೆಡ್ಡಿಯಲ್ಲಿ ಬಾಲಕ ವಿವೇಕ್​ ಆರೋಗ್ಯ ತಪಾಸಣೆ ಮುಗಿಸಿ ಕುಟುಂಬದವರು ವಾಪಸ್​ ಬರುತ್ತಿದ್ದರು. ಈ ವೇಳೆ ಕಾರು ಅತಿ ಹೆಚ್ಚು ವೇಗದಲ್ಲಿದ್ದು, ಮಧ್ಯಾಹ್ನ 3:15 ರ ಸುಮಾರಿಗೆ ಅಪಘಾತವಾಗಿದೆ ಎಂದು ತಿಳಿಸಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಐವರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಂಗಾರೆಡ್ಡಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net