ಸ್ನೇಹಿತನ ಜನ್ಮದಿನ ಆಚರಿಸಲು ಗೋವಾಕ್ಕೆ ತೆರಳಿದ್ದ ಯುವಕರಿಬ್ಬರ ದಾರುಣ ಅಂತ್ಯ

1607066590477_car (1)
Published on

ಶಿವಮೊಗ್ಗ: ಸ್ನೇಹಿತನ ಜನ್ಮದಿನ ಆಚರಿಸಲು ಗೋವಾಕ್ಕೆ ತೆರಳಿದ್ದ ಬೆಂಗಳೂರು ಮೂಲದ ಯುವಕರಿಬ್ಬರು ಭದ್ರಾವತಿ ತಾಲೂಕಿನ ಸಿದ್ಧಾಪುರ ಬಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಆರು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಂಗಳೂರು ವಿಜಯನಗರದ ರಾಜೇಶ್(19), ತರುಣ್(19) ಸ್ಥಳದಲ್ಲೇ ಮೃತಪಟ್ಟರೆ, ಪುನೀತ್ (18), ನವೀನ್(20), ಚಂದ್ರ(20), ಪ್ರೇರಣ್ (19) ಹಾಗೂ ಲಿಖಿತ್(18) ಗಾಯಗೊಂಡಿದ್ದಾರೆ.

ಸ್ನೇಹಿತನ ಜನ್ಮದಿನದ ಸಂಭ್ರಮವನ್ನು ಆಚರಿಸಲು ಕಳೆದ ಮಂಗಳವಾರ ಗೋವಾಕ್ಕೆ ತೆರಳಿದ್ದರು. ಬರ್ತಡೇ ಬಳಿಕ ಎರಡು ದಿನ ಗೋವಾ ಪ್ರವಾಸ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ಸಾಗುತ್ತಿದ್ದರು.

ಈ ವೇಳೆ ಭದ್ರಾವತಿ ತಾಲೂಕಿನ ಸಿದ್ದಾಪುರ ಬಳಿ ಮರಕ್ಕೆ ಕಾರು ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಮರಕ್ಕೆ ಅಪ್ಪಳಿದೆ. ಅಪಘಾತದಲ್ಲಿ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಭದ್ರಾವತಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net