ಮಣ್ಣಲ್ಲಿ ಮಣ್ಣಾದ ಕ್ಯಾಪ್ಟನ್​ ವಿಜಯಕಾಂತ್​

Captain Vijayakanth
Published on

ಚೆನ್ನೈ: ತಮಿಳು ನಟ, ರಾಜಕಾರಣಿ ವಿಜಯ್​ಕಾಂತ್​ ಅವರನ್ನು ಡಿಎಂಡಿಕೆ ಪಕ್ಷದ ಕಚೇರಿ ಆವರಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯೆಕ್ರಿಯೆ ಮಾಡಲಾಗಿದೆ. ಚೆನ್ನೈನ ಐಲ್ಯಾಂಡ್​ ಮೈದಾನದಿಂದ ಪಕ್ಷದ ಪ್ರಧಾನ ಕಚೇರಿವರೆಗೂ ನಡೆದ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

ಐಲ್ಯಾಂಡ್ ಮೈದಾನದಿಂದ ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾದ ಅಂತಿಮ ಯಾತ್ರೆ ಸಂಜೆ 6 ಘಂಟೆ ವೇಳೆಗೆ ಡಿಎಂಡಿಕೆ ಪಕ್ಷದ ಕಚೇರಿ ತುಲುಪಿತು. . 71 ವರ್ಷದ ವಿಜಯ್​ಕಾಂತ್​ ಅವರು ಗುರುವಾರ (ಡಿಸೆಂಬರ್ 28) ಮುಂಜಾನೆ 6:10ಕ್ಕೆ ಕೊನೆಯುಸಿರು ಎಳೆದಿದ್ದರು. ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಂತ್ಯಸಂಸ್ಕಾರದಲ್ಲಿ ತೆಲಂಗಾಣ ರಾಜ್ಯಪಾಲೆ ತೆಲಂಗಾಣ ರಾಜ್ಯಪಾಲ ತಮಿಳಿಸಾಯಿ ಸೌಂದರರಾಜನ್, ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ, ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ಹಲವು ಕ್ಷೇತ್ರದ ಗಣ್ಯರು ವಿಜಯಕಾಂತ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.

Vijayakanth
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net