More

    ಕಮಾಲ್​ ಮಾಡಿದ ಕಾಟೇರ; ಮೊದಲ ದಿನ ಗಳಿಸಿದ್ದೆಷ್ಟು?

    ಬೆಂಗಳೂರು: ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ನಟನೆಯ, ತರುಣ್​ ಸುದೀರ್​ ನಿರ್ದೇಶನದ ಬಹು ನಿರೀಕ್ಷಿತ ಕಾಟೇರ ಚಿತ್ರ ಇಂದು (ಡಿಸೆಂಬರ್ 29) ಬಿಡುಗಡೆಯಾಗಿದ್ದು, ಭರ್ಜರಿ ಓಪನಿಂಗ್​ ಪಡೆದುಕೊಂಡಿದೆ. ಮೊದಲ ದಿನವೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳು ಪಡದುಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ.

    ದರ್ಶನ್​ ನಟನೆಯ ಕಾಟೇರ ಚಿತ್ರವು ಕರ್ನಾಟಕದಾದ್ಯಂತ ಮೊದಲ ದಿನ 1670 ಪ್ರದರ್ಶನ ಕಂಡಿದೆ. 389 ಸಿಂಗಲ್ ಸ್ಕ್ರೀನ್‌ಗಳಲ್ಲಿ ಹಾಗೂ 72 ಮಲ್ಟಿಪ್ಲೆಕ್ಸ್​ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಇನ್ನು ಕಲೆಕ್ಷನ್​ ವಿಚಾರಕ್ಕೆ ಬಂದರೆ ಈ ಬಾರಿಯೂ ದರ್ಶನ್​ ತಾವು ಬಾಕ್ಸ್​ಆಫೀಸ್​ ಸುಲ್ತಾನ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ.

    ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ; ಧಾರ್ಮಿಕ ಭಾವನೆಗಳ ದುರ್ಬಳಕೆ ಎಂದ ಸೀತಾರಾಮ್ ಯಚೂರಿ

    ಇತ್ತ ಲಭ್ಯವಾಗಿರುವ ಮಾಹಿತಿ ಪ್ರಕಾರ ಚಿತ್ರ ಮೊದಲ ದಿನ 19.79 ಕೋಟಿ ರೂ. (ಗ್ರಾಸ್ ಕಲೆಕ್ಷನ್) ಕಮಾಯಿ ಮಾಡಿದೆ. ಇನ್ನು ವಿತರಕರು ಹೇಳುವ ಪ್ರಕಾರ ಚಿತ್ರ ಮೊದಲ ದಿನ 20-25 ಕೋಟಿ ಬಾಷಬಹುದು ಎಂದು ಅಂದಾಜಿಸಿದ್ದಾರೆ. ಒಂದೊಮ್ಮೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರವನ್ನು ಬಿಡುಗಡೆ ಮಾಡಿದ್ದರೆ ಗಳಿಕೆ ಮತ್ತಷ್ಟು ಹೆಚ್ಚುತ್ತಿತ್ತು.

    ಈ ಚಿತ್ರದ ಮೂಲಕ ಕನಸಿನ ರಾಣಿ ಮಾಲಾಶ್ರೀ ಅವರ ಪುತ್ರಿ ಆರಾಧನಾ ರಾಮ್​ ಸ್ಯಾಂಡಲ್​ವುಡ್​ಗೆ ಪಾದರ್ಪಣೆ ಮಾಡುತ್ತಿದ್ದು, ಚಿತ್ರದಲ್ಲಿ ಹಿರಿಯ ನಟರಾದ ಬಿರಾದಾರ್, ಜಗಪತಿ ಬಾಬು, ಕುಮಾರ್​ ಗೋವಿಂದ್, ಮಾಸ್ಟರ್ ರೋಹಿತ್ ಮತ್ತು ಡ್ಯಾನಿಶ್ ಅಖ್ತರ್ ಸೈಫಿ ನಟಿಸಿದ್ದಾರೆ. ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆದಿದ್ದು, ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ, ಸುಧಾಕರ್ ಎಸ್ ರಾಜ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts