More

    ಮೊದಲ ಟೆಸ್ಟ್​ ಪಂದ್ಯದಲ್ಲಿ ಸೋಲು; ಟೀಕಾಕಾರರ ಚಳಿ ಬಿಡಿಸಿದ ನಾಯಕ ರೋಹಿತ್​

    ಸೆಂಚುರಿಯನ್: ಇಲ್ಲಿನ ಇಲ್ಲಿನ ಸೂಪರ್​ಸ್ಪೋರ್ಟ್​ ಪಾರ್ಕ್​ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಅತಿಥೇಯರ ವಿರುದ್ಧ ಭಾರತ ತಂಡ ಇನ್ನಿಂಗ್ಸ್‌ ಹಾಗೂ 32 ರನ್‌ಗಳಿಂದ ಸೋಲು ಕಂಡಿದೆ. ಮೂರು ದಿನಗಳ ಒಳಗಾಗಿ ಮುಕ್ತಾಯಗೊಂಡ ಟೆಸ್ಟ್​ ಪಂದ್ಯದಲ್ಲಿ ಭಾರತದ ಬ್ಯಾಟ್ಸ್​ಮನ್​ಗಳು ಅತಿಥೇಯರ ಬೌಲಿಂಗ್​ ದಾಳಿ ಎದುರು ಹೆಚ್ಚು ಹೊತ್ತು ನಿಲ್ಲಲಿಲ್ಲ.

    ಟೀಂ ಇಂಡಿಯಾ ಪರ ಮೊದಲ ಇನ್ನಿಂಗ್ಸ್​ನಲ್ಲಿ ಕೆ.ಎಲ್. ರಾಹುಲ್ (101 ರನ್, 137 ಎಸೆತ, 14 ಬೌಂಡರಿ, 4 ಸಿಕ್ಸರ್), ಎರಡನೇ ಇನ್ನಿಂಗ್ಸ್​ನಲ್ಲಿ ವಿರಾಟ್​ ಕೊಹ್ಲಿ (76 ರನ್, 82 ಎಸೆತ, 12 ಬೌಂಡರಿ, 1 ಸಿಕ್ಸರ್) ಬಿಟ್ಟರೆ ಉಳಿದ ಯಾವ ಬ್ಯಾಟ್ಸ್​ಮನ್ ಉತ್ತಮ ಮೊತ್ತ ಪೇರಿಸುವಲ್ಲಿ ತಂಡವನ್ನು ಆಧರಿಸಲಿಲ್ಲ.

    ಮೋಟಿವೇಟ್ ಮಾಡುವ ಅಗತ್ಯವಿಲ್ಲ

    ಈ ಕುರಿತು ಮಾತನಾಡಿರುವ ಟೀಂ ಇಂಡಿಯಾ ನಾಯಕ ರೋಹಿತ್​ ಶರ್ಮಾ, ನಮ್ಮ ಬ್ಯಾಟರ್​ಗಳನ್ನು ಮೋಟಿವೇಟ್ ಮಾಡುವ ಅಗತ್ಯವಿಲ್ಲ. ಅವರೆಲ್ಲರೂ ಅಂತರರಾಷ್ಟ್ರೀಯ ಕ್ರಿಕೆಟಿಗರು. ಈ ಪ್ರದರ್ಶನವು ಕೇವಲ ಒಂದು ಪಂದ್ಯದ್ದು ಮಾತ್ರ. ನಾವು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಲ್ಲಿ ಏನು ಮಾಡಿದ್ದೇವೆ ಎಂಬುದನ್ನು ಮರೆಯಬೇಡಿ. ನಾವು ಆಸ್ಟ್ರೇಲಿಯಾದಲ್ಲಿ ನಮ್ಮ ಬ್ಯಾಟಿಂಗ್‌ನಿಂದ ಗೆದ್ದಿದ್ದೇವೆ. ಇಂಗ್ಲೆಂಡ್‌ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ ಮೂಲಕ ಡ್ರಾ ಪಂದ್ಯವನ್ನು ಡ್ರಾ ಮಾಡಿದ್ದೇವೆ.

    ನಮಗೆ ಭಾರತದ ಹೊರಗೆ ಬ್ಯಾಟ್ ಮಾಡುವುದು ಗೊತ್ತಿಲ್ಲ ಅಂತಲ್ಲ. ಕೆಲವೊಮ್ಮೆ ಎದುರಾಳಿ ತಂಡ ನಮಗಿಂತ ಚೆನ್ನಾಗಿ ಆಡುತ್ತೆ. ಅವರು 110 ಓವರ್ ಬ್ಯಾಟ್ ಮಾಡಿದ್ರು ನಮಗೆ ಅದನ್ನೂ ಮಾಡಲಾಗಲಿಲ್ಲ. ನೀವು ಹೋಗಿ ನಮ್ಮ ಕೊನೆಯ ನಾಲ್ಕೈದು ವಿದೇಶಿ ಪಂದ್ಯದ ಸ್ಕೋರ್‌ಕಾರ್ಡ್‌ಗಳನ್ನು ಪರಿಶೀಲಿಸಿ ಎಂದು ಟೀಕೆಗಳಿಗೆ ಖಡಕ್​ ಆಗಿಯೇ ತಿರುಗೇಟು ನೀಡಿದ್ದಾರೆ.

    ಇದನ್ನೂ ಓದಿ: ಅತಿಥಿ ಉಪನ್ಯಾಸಕರ ವೇತನ ಹೆಚ್ಚಿಸಿದ ಸರ್ಕಾರ; ಆರೋಗ್ಯ ವಿಮೆ ಸೇರಿದಂತೆ ಹಲವು ಮಹತ್ವದ ಘೋಷಣೆ

    ಯಶಸ್ಸು ಸಿಗಲಿಲ್ಲ

    ಇದು 400 ರನ್‌ಗಳ ವಿಕೆಟ್ ಆಗಿರಲಿಲ್ಲ, ನಾವು ಹೆಚ್ಚು ರನ್ ಬಿಟ್ಟುಕೊಟ್ಟಿದ್ದೇವೆ. ನಾವು ಚೆಂಡನ್ನು ಉತ್ತಮವಾಗಿ ಹಾಕಿದೆವು, ಆದರೆ ಯಶಸ್ಸು ಸಿಗಲಿಲ್ಲ. ಒಬ್ಬ ಬೌಲರ್ (ಬುಮ್ರಾ) ಮೇಲೆ ಹೆಚ್ಚು ಅವಲಂಬಿತರಾಗಲು ಸಾಧ್ಯವಿಲ್ಲ. ಇತರ ಮೂವರು ವೇಗಿಗಳು ತಮ್ಮ ಪ್ರದರ್ಶನವನ್ನು ನೀಡಬೇಕಾಗಿತ್ತು ಎಂದು ಪರೋಕ್ಷವಾಗಿ ಬೌಲರ್​ಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ದಕ್ಷಿಣ ಆಫ್ರಿಕಾ ಹೇಗೆ ಬೌಲಿಂಗ್ ಮಾಡಿತು ಎಂಬುದನ್ನು ನೋಡಿ ನಾವು ಕಲಿಯಬಹುದು. ಬುಮ್ರಾ ಚೆನ್ನಾಗಿ ಬೌಲಿಂಗ್ ಮಾಡಿದರು. ಆದರೆ, ಉಳಿದ ಬೌಲರ್​ಗಳಿಂದ ಬುಮ್ರಾಗೆ ಸರಿಯಾದ ಬೆಂಬಲ ಸಿಗಲಿಲ್ಲ. ನಾವು ಬಯಸಿದ ರೀತಿಯಲ್ಲಿ ಈ ಬರಿ ನಡೆಯಲಿಲ್ಲ. ಆದರೆ ಈ ರೀತಿಯ ಆಟಗಳು ನಮಗೆ ಬಹಳಷ್ಟು ಕಲಿಸುತ್ತದೆ ಎಂದು ಟೀಂ ಇಂಡಿಯಾ ನಾಯಕ ರೋಹಿತ್​ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts