ಬಿಸಿ ಬಿಸಿ ಸೂಪ್​ಗಾಗಿ ನಡೆಯಿತು 300 ಬೆಕ್ಕುಗಳ ಮಾರಣ ಹೋಮ

Cat
Published on

ನವದೆಹಲಿ: ಸಾಮಾನ್ಯವಾಗಿ ಚಳಿಗಾಲದಲ್ಲಿ ಜನರು ಬೆಚ್ಚನೆಯ ಆಹಾರವನ್ನು ಸೇವಿಸಲು ಇಷ್ಟಪಡುತ್ತಾರೆ. ಅದರಲ್ಲಿ ಹೆಚ್ಚಿನವರು ವೆಜ್​ ಹಾಗೂ ನಾನ್​ವೆ್​ ಸೂಪ್​ಗಳನ್ನು ಸವಿಯುತ್ತಾರೆ. ಇದೀಗ ವ್ಯಕ್ತಿಯೋರ್ವ ಪ್ರತಿದಿನ ಬೆಕ್ಕುಗಳನ್ನು ಕೊಂದು ಅದರಿಂದ ತಯಾರಿಸಿದ ಸೂಪ್​ಅನ್ನು ಗ್ರಾಹಕರಿಗೆ ಬಡಿಸುತ್ತಿದ್ದ ಎಂಬ ಆಘಾತಕಾರಿ ಸುದ್ದಿಯೊಂದು ಬೆಳಕಿಗೆ ಬಂದಿದೆ.

ವಿಯೆಟ್ನಾಂನಲ್ಲಿ ಘಟನೆ ನಡೆದಿದ್ದು, ಇದು ಬೆಳಕಿಗೆ ಬಂದ ನಂತರ ವ್ಯಕ್ತಿ ಹೋಟೆಲ್​ ಮುಚ್ಚಿದ್ದು, 20ಕ್ಕೂ ಹೆಚ್ಚಿನ ಬೆಕ್ಕು ಹಾಗೂ ಅದರ ಮರಿಗಳನ್ನು ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಹೋಟೆಲ್​ನ ಮಾಲೀಕ ಫಾಮ್ ಕ್ವೋಕ್ ಡೊನ್ಹ್, ಮೊದಲು ತನ್ನ ರೆಸ್ಟೋರೆಂಟ್​​​ನಲ್ಲಿ ಇತರರಂತೇ ಸಾಮಾನ್ಯ ಆಹಾರವನ್ನು ನೀಡುತ್ತಿದ್ದೆ, ಆದರೆ ಯಾರೂ ಗ್ರಾಹಕರು ಬರುತ್ತಿರಲಿಲ್ಲ. ಆದ್ದರಿಂದ ಆರ್ಥಿಕವಾಗಿ ನಷ್ಟ ಅನುಭವಿಸಿದ್ದರಿಂದ ಸಂಸಾರ ನಿರ್ವಹಣೆ ತುಂಬಾ ಕಷ್ಟವಾಯಿತು. ಆ ನಂತರ ಬೆಕ್ಕಿನ ಸೂಪ್ ಮಾರಾಟವನ್ನು ಏಕೆ ಪ್ರಾರಂಭಿಸಬಾರದು ಎಂದು ಯೋಚಿಸಿದೆ. ಈ ಆಲೋಚನೆಯೊಂದಿಗೆ ನನ್ನ ವ್ಯವಹಾರ ಪ್ರಾರಂಭವಾಯಿತು.

Cat Soup

ಮೊದಲಿಗೆ ಬೆಕ್ಕುಗಳನ್ನು ಕೋಲಿನ ಸಹಾಯದಿಂದ ನೀರಿನಲ್ಲಿ ಮುಳುಗಿಸಿ ಸಾಯಿಸುತ್ತಿದ್ದೆ. ಈ ಸಮಯದಲ್ಲಿ ಬೆಕ್ಕು ಸಾಯುವಾಗ ನರಳುವುದನ್ನು ನೋಡಿ ನನ್ನ ಮನಸ್ಸಿಗೆ ನೋವುಂಟಾಗಿದ್ದರೂ ಸಹ ತನ್ನ ಸಂಸಾರದ ನಿರ್ವಹಣೆಯ ಮುಂದೆ ಅಸಹಾಯಕನಾಗಿದ್ದೆ. ವ್ಯಾಪಾರಕ್ಕಾಗಿ ನಾನು ಪ್ರತಿದಿನ ಹತ್ತು ಬೆಕ್ಕುಗಳನ್ನು ಕೊಲ್ಲುತ್ತಿದ್ದೆ. ಆದರೆ ಇನ್ನೂ ಮುಂದೆ ಇಂತಹ ಹಿಂಸೆಯ ಕೃತ್ಯದಿಂದ ಹೊರಬರಲು ನಿರ್ಧರಿಸಿದ್ದೇನೆ. ಹಣಕ್ಕಾಗಿ ಮುಗ್ಧ ಜೀವಿಗಳನ್ನು ಕೊಲ್ಲಲಾರೆ.

ಈಗ ನಾನು ಹೋಟೆಲ್​ಅನ್ನು ಮುಚ್ಚಿದ್ದೇನೆ. ನನ್ನ ಮನಸ್ಸಿನಲ್ಲಿ ಪ್ರಶಾಂತವಾದ ವಾತಾವರಣ ನಿರ್ಮಾಣವಾಗಿದ್ದು, ಇನ್ನು ಮುಂದೆ ಈ ರೀತಿಯ ಯಾವುದೇ ಕೆಲಸದಲ್ಲಿ ಭಾಗಿಯಾಗುವುದಿಲ್ಲ ಮತ್ತು ನನ್ನ ಕುಟುಂಬಸ್ಥರಿಗೂ ಈ ರೀತಿ ಮಾಡಂದತೆ ಹೇಳುತ್ತೇನೆ ಎಂದು ಹೋಟೆಲ್​ ಮಾಲೀಕ ಫಾಮ್ ಕ್ವೋಕ್ ಡೊನ್ಹ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net