ರಾಜಧಾನಿಯಲ್ಲಿ 72ವರ್ಷದಲ್ಲೇ ದಾಖಲೆಯ ಬಿಸಿಲು!

Delhi heatwave
Published on

ನವದೆಹಲಿ: ಈ ವರ್ಷ ಬಿಸಿಗಾಳಿಗೆ ರಾಜಧಾನಿ ದೆಹಲಿ ತತ್ತರಿಸಿದ್ದು, ಅಧಿಕ ತಾಪಮಾನ ದಾಖಲಾಗುವ ಮೂಲಕ 72 ವರ್ಷದ ದಾಖಲೆಯನ್ನೇ ಮುರಿದಿದೆ. ಸೋಮವಾರ ಗರಿಷ್ಠ 42.2ರಷ್ಟು ಸೆಲ್ಸಿಯಸ್​ ತಾಪಮಾನವಿದ್ದು, ಇದು ಐದು ವರ್ಷದಿಂದ ಸತತ ಏರಿಕೆ ಜತೆಗೆ ಏಳು ದಶಕಗಳಲ್ಲೇ ಅಧಿಕವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

2017ರಲ್ಲಿ 43.7ರಷ್ಟು ಅತಿ ಹೆಚ್ಚು ತಾಪಮಾನ ದಾಖಲಾಗಿತ್ತು. ಏಪ್ರಿಲ್​ ಆರಂಭದಲ್ಲೇ ಗರಿಷ್ಠ ತಾಪಮಾನವಿದ್ದು, ಮೇ ಹಾಗೂ ಜೂನ್​ ತಿಂಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.

ಈಗ ಸುಡುವ ಬಿಸಿಲಿನೊಂದಿಗೆ ಸೂರ್ಯೋದಯದವನ್ನು ದಿಲ್ಲಿ ಜನತೆ ಸ್ವಾತಗತಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net