

ಹುಣಸೂರು; ಶುಂಠಿ ಸಾಗಿಸುತ್ತಿದ್ದ ಕ್ಯಾಂಟರ್ ಲಾರಿ ಭಾನುವಾರ ಮಧ್ಯರಾತ್ರಿ ರಸ್ತೆಬದಿಯಲ್ಲಿನ ಮನೆಗೆ ನುಗ್ಗಿದ ಪರಿಣಾಮ ಮನೆಯ ಮುಂಭಾಗ ಜಖಂಗೊಂಡಿದೆ.
ನಗರದ ಚಿಕ್ಕಹುಣಸೂರಿನ ವಿನಾಯಕನಗರ ಬಡಾವಣೆ(ಬಾಚಳ್ಳಿ ಕ್ರಾಸ್) ಬಳಿ ಚಂದ್ರಶೇಖರ್ ಅವರ ಮನೆಗೆ ರಾಜಸ್ತಾನ ಮೂಲದ ಕ್ಯಾಂಟರ್ ಚಾಲಕ ಗೋಪಾಲ್ ಸಿಂಗ್ ರಾವತ್ ವಾಹನವನ್ನು ಮನೆಯೊಳಗೆ ನುಗ್ಗಿಸಿದ್ದಾನೆ. ಪವಾಡವೆಂಬಂತೆ ಮನೆಯಲ್ಲಿ ವೃದ್ಧ ತಾಯಿ ಸೇರಿದಂತೆ ನಾಲ್ವರು ಇದ್ದರೂ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.
ವಾಹನದ ಮುಂಭಾಗ ಜಖಂಗೊಂಡಿದ್ದು, ಚಾಲಕನನ್ನು ವಶಕ್ಕೆ ಪಡೆದ ನಗರಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.