

ಬೆಂಗಳೂರು: ಹೊಸ ವರ್ಷ ಬರುತ್ತಿದ್ದಂತೆ ಎಲ್ಲರೂ ಹೊಸ ಜೀವನವನ್ನು ಆರಂಭಿಸಬೇಕೆಂದು ಬಯಸುತ್ತಾರೆ. ಹೊಸ ವರ್ಷವನ್ನು ಹೇಗೆ ಬರ ಮಾಡಿಕೊಳ್ಳಬೇಕು ಎಂದು ಕೆಲವಷ್ಟು ಪ್ಲ್ಯಾನ್ಗಳನ್ನು ಹಾಕಿಕೊಂಡಿರುತ್ತಾರೆ. ನಮ್ಮ ಬ್ಯುಸಿ ಶೆಡ್ಯೂಲ್‌ಗಳಿಂದಾಗಿ ದೂರ ಪ್ರಯಾಣ ಮಾಡಲು ಅಥವಾ ಹೊಸ ವರ್ಷವನ್ನು ಆಚರಿಸಲು ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಸಮಯ ಸಿಗದೇ ಇರುವವರು ನಮ್ಮಲ್ಲಿ ಅನೇಕರಿದ್ದಾರೆ. ಬ್ಯುಸಿ ಇದ್ದೇವೆ ಹೇಗೆ ಸೆಲೆಬ್ರೆಟ್ ಮಾಡುವುದು ಎಂದು ಯೋಚಿಸುತ್ತೀರುವ ನಿಮಗೆ ನಾವು ಇಂದು ಕೆಲವು ಟಿಪ್ಸ್ ನೀಡುತ್ತೇವೆ.
1) 31 ಮತ್ತು 1 ರಂದು ನಿಮಗೆ ಹಗಲಿನಲ್ಲಿ ಸಮಯವಿಲ್ಲದಿದ್ದರೂ, ನೀವು ರಾತ್ರಿ 8 ಗಂಟೆಯ ನಂತರ ಸಮಯ ತೆಗೆದುಕೊಂಡು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ರಾತ್ರಿ ಊಟಕ್ಕೆ ಹೋಗಬಹುದು.
2) ನಿಮಗೆ ಹೊರಗೆ ಹೋಗಲು ಸಮಯವಿಲ್ಲದಿದ್ದರೆ, ಮನೆಯಲ್ಲಿ ನಿಮ್ಮ ಸ್ನೇಹಿತರು, ಹತ್ತಿರದ ಸಂಬಂಧಿಕರನ್ನು ಕರೆದು ಅವರೊಂದಿಗೆ ಹೊಸ ವರ್ಷವನ್ನು ಆಚರಿಸಿ.
3) ಮನೆಯಲ್ಲಿ ವಿವಿಧ ರೀತಿಯ ರೀತಿಯ ಭಕ್ಷ್ಯಗಳನ್ನು ತಯಾರಿಸಿ ಕುಟುಂಬದ ಜತೆ ಕುಳಿತು ಸೇವಿಸಿ.
4) ಹೊಸ ವರ್ಷದಂದು ಅನೇಕ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನಿಮ್ಮ ಮನೆಯ ಸಮೀಪ ಆಯೋಜಿಸಲಾದ ಈವೆಂಟ್‌ನಲ್ಲಿ ನೀವು ಭಾಗವಾಗಬಹುದು.
5) ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮನೆಯಲ್ಲಿ ಕುಳಿತು ಚಲನಚಿತ್ರಗಳು ಮತ್ತು ವೆಬ್ ಸರಣಿಗಳನ್ನು ವೀಕ್ಷಿಸಲು ನೀವು ಯೋಜಿಸಬಹುದು.
6) ನೀವು ಕುಟುಂಬದಿಂದ ದೂರ ವಾಸಿಸುತ್ತಿದ್ದರೆ, ನಿಮ್ಮ ಕಚೇರಿಯ ಸಹೋದ್ಯೋಗಿಗಳೊಂದಿಗೆ ನೀವು ಅದನ್ನು ಆಚರಿಸಬಹುದು. ಇದಕ್ಕಾಗಿ, ನೀವು ಕಚೇರಿಯ ನಂತರ ಅವರೊಂದಿಗೆ ಡಿನ್ನರ್ ಅಥವಾ ಪಾರ್ಟಿಯನ್ನು ಯೋಜಿಸಬಹುದು.