ಟಾಯ್ಲೆಟ್​ಗೆ ಹೋದರೂ ಫ್ಲಶ್​ ಮಾಡೋಕೆ ನೀರಿಲ್ಲ ಗುರು...; ಈಕೆ ಕಷ್ಟ ಕೇಳೋರು ಯಾರು ಇಲ್ವಂತೆ

Olie Esse
Published on

ಮುಂಬೈ: ದೇಶದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದ್ದು, ಇದರ ಜೊತೆ ನೀರಿನ ಅಭಾವವು ಜನರನ್ನು ಪ್ರಮುಖವಾಗಿ ಕಾಡುತ್ತಿದೆ. ಕಳೆದ ವರ್ಷ ಸರಿಯಾದ ಮಳೆಯಾಗದ ಕಾರಣ ದೇಶದ ಹಲವೆಡೆ ಡ್ಯಾಂ ಹಾಗೂ ಕೆರೆಗಳು ಬತ್ತಿ ಹೋಗಿದ್ದವು. ಇನ್ನು ವಾಣಿಜ್ಯ ನಗರಿ ಮುಂಬೈ ಕೂಡ ಬಿಸಿಲಿನ ಹೊಡೆತ ಹಾಗಗೂ ನೀರಿನ ಅಭಾವಕ್ಕೆ ತುತ್ತಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಇಟಾಲಿಯನ್​ ಡಿಜೆ ಓಲಿ ಎಸ್ಸೆ ಬಿಎಂಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇಟಲಿ ಮೂಲದ ಡಿಜೆ ಓಲಿ ಎಸ್ಸೆ ಕಳೆದ ಕೆಲ ವರ್ಷಗಳಿಂದ ಮುಂಬೈನ ಬಾಂದ್ರಾದಲ್ಲಿ ವಾಸಿಸುತ್ತಿದ್ದಾರೆ. ಅವರು ವಾಸಿಸುತ್ತಿರುವ ಪ್ರದೇಶದಲ್ಲಿ ನೀರಿನ ಪೈಪ್​ ಹೊಡೆದಿದ್ದು, ಈ ಬಗ್ಗೆ ಟ್ವಿಟರ್​ನಲ್ಲಿ ವಿಡಿಯೋ ಪೋಸ್ಟ್​ ಮಾಡಿರುವ ಓಲಿ ಬಿಎಂಸಿ ಅಧಿಕಾರಿಗಳ ನಡೆಗೆ ಕಿಡಿಕಾರಿದ್ದಾರೆ. ಇವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವೈರಲ್ ಆಗಿರುವ ವಿಡಿಯೋ ನೋಡುವುದಾದರೆ, ಎರಡು ವಾರಗಳ ಹಿಂದೆ ಲಕ್ಕಿ ಜಂಕ್ಷನ್​ ಬಳಿ ಕಾಮಗಾರಿ ಹೆಸರಿನಲ್ಲಿ ಯಾರೋ ಪೈಪನ್ನು ಹೊಡೆದು ಹಾಕಿದ್ದಾರೆ. ಅಂದಿನಿಂದ ಪ್ರತಿದಿನ ನೀರು ಪೋಲಾಗುತ್ತಿದ್ದು, ಈ ಬಗ್ಗೆ ಪ್ರತಿನಿತ್ಯ ಬಿಎಂಸಿ ಅಧಿಕಾರಿಗಳಿಗೆ ಕರೆ ಮಾಡಿ ಸರಿ ಪಡಿಸುವಂತೆ ಕೇಳಿಕೊಳ್ಳುತ್ತಿದ್ದೇವೆ. ಪ್ರತಿಬಾರಿಯೂ ಕರೆ ಮಾಡಿದಾಗ ಬಂದು ಸರಿಪಡಿಸುತ್ತೇವೆ ಎಂದು ಹೇಳುತ್ತಿದ್ದಾರೆ ಹೊರತು ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.

ನಾನು ವಾಸಿಸುವ ಅಪಾರ್ಟ್​ಮೆಂಟ್​ನಲ್ಲಿ ಪರಿಸ್ಥಿತಿ ಭಯಾನಕವಾಗಿದ್ದು, ಎರಡು ವಾರಗಳಿಂದ ಟಾಯ್ಲೆಟ್​ಗೆ ಹೋದರು ಫ್ಲಶ್​ ಮಾಡಲು ನೀರಿಲ್ಲದಂತಾಗಿದೆ. ನಾನು ಸರ್ಕಾರಕ್ಕೆ ಲಕ್ಷಗಟ್ಟಲೇ ತೆರಿಗೆ ಪಾವತಿಸುತ್ತಿರುವುದರಿಂದ ಆದ್ದರಿಂದ ದಯವಿಟ್ಟು ಸುಮ್ಮನೆ ನಮಗೆ ಸುಳ್ಳು ಹೇಳುವುದನ್ನು ನಿಲ್ಲಿಸಿ ಮೊದಲು ಬಂದು ಹೊಡೆದಿರುವ ಪೈಪ್​ ರಿಪೇರಿ ಮಾಡಿ ಎಂದು ಇಟಾಲಿಯನ್​ ಡಿಜೆ ಓಲಿ ಎಸ್ಸೆ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net