ಮೈಸೂರು ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಬಳಿ ಗಾಂಜಾ ಪತ್ತೆ

Published on

ಮೈಸೂರು: ವಿಚಾರಣಾಧೀನ ಕೈದಿಯೊಬ್ಬನನ್ನು ನಗರದ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಕರೆ ತರುತ್ತಿದ್ದ ಸಂದರ್ಭ ಆತನ ಬಳಿ ಗಾಂಜಾ ಇರುವುದು ತಪಾಸಣೆಯ ಸಂದರ್ಭ ಬೆಳಕಿಗೆ ಬಂದಿದೆ.

ವಿಚಾರಣಾಧೀನ ಕೈದಿ ಅಜಂಖಾನ್ ಎಂಬಾತನನ್ನು ಇತ್ತೀಚೆಗೆ ನಗರದ ಕೇಂದ್ರ ಕಾರಾಗೃಹಕ್ಕೆ ಕರೆ ತಂದ ಸಂದರ್ಭ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ತಪಾಸಣೆ ನಡೆಸಿದರು. ತಪಾಸಣೆ ಸಂದರ್ಭ ಕೈದಿಯ ಒಳ ಉಡುಪಿನಲ್ಲಿ 10 ಗ್ರಾಂ ಗಾಂಜಾ ಪತ್ತೆಯಾಯಿತು. ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net