

ಇಂದು ಯುಪಿಎಸ್ಸಿ -2019 ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಹರ್ಯಾಣದ ಪ್ರದೀಪ್ ಸಿಂಗ್ ಮೊದಲನೇ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಹಾಗೇ ದೆಹಲಿಯ ಜತಿನ್ ಕಿಶೋರ್ ಮತ್ತು ಉತ್ತರ ಪ್ರದೇಶದ ಪ್ರತಿಭಾ ವರ್ಮಾ ಕ್ರಮವಾಗಿ ಎರಡು ಮತ್ತು ಮೂರನೇ ರ್ಯಾಂಕ್ನೊಂದಿಗೆ ಟಾಪರ್ಸ್ ಸ್ಥಾನಕ್ಕೇರಿದ್ದಾರೆ.
ಆದರೆ ಈ ಬಾರಿ ಯುಪಿಎಸ್ಸಿ ಪರೀಕ್ಷೆ ಫಲಿತಾಂಶದ ಲಿಸ್ಟ್ನಲ್ಲಿ ಒಂದು ವಿಚಿತ್ರ ನಡೆದಿದೆ. 420ನೇ ರ‍್ಯಾಂಕ್ ಪಡೆದಿರುವ ಅಭ್ಯರ್ಥಿ ರಾಹುಲ್ ಮೋದಿ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ 'ರಾಹುಲ್ ಮೋದಿ-420' ಎಂದು ಟ್ರೆಂಡ್ ಆಗುತ್ತಿದೆ.
ಭಾರತೀಯ ರಾಜಕಾರಣದಲ್ಲಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ನ ರಾಹುಲ್ ಗಾಂಧಿ ಪರಸ್ಪರ ವಿರೋಧಿಗಳು. ಆದರೆ ಕಾಕತಾಳೀಯವೆಂಬಂತೆ ಯುಪಿಎಸ್ಸಿಯಲ್ಲಿ 420ನೇ ರ‍್ಯಾಂಕ್ ಪಡೆದವರ ಹೆಸರು ಇಬ್ಬರೂ ರಾಜಕಾರಣಿಗಳ ಅರ್ಧ ಹೆಸರನ್ನೊಳಗೊಂಡಿದೆ. ಅದೂ 420ನೇ ಸ್ಥಾನದಲ್ಲೇ ಬಂದಿದ್ದು ನೆಟ್ಟಿಗರಿಗೆ ಆಹಾರವಾದಂತಾಗಿದೆ. (ಏಜೆನ್ಸೀಸ್)