ಆಯುಕ್ತಾಲಯಕ್ಕೆ ಪ್ರತ್ಯಾಯೋಜನೆ ರದ್ದು | Re-established in secretariate

Ramesh Sanga
Published on

ಬೆಂಗಳೂರು: ಕಂದಾಯ ಇಲಾಖೆಯ ಕಾರ್ಯಭಾರವು ಸಚಿವಾಲಯದಲ್ಲೇ ಮರು ಸ್ಥಾಪನೆಯಾಗಿದೆ. ಆಯುಕ್ತಾಲಯಕ್ಕೆ ನೀಡಿದ್ದ ಅಧಿಕಾರ ಪ್ರತ್ಯಾಯೋಜನೆ ರದ್ದುಪಡಿಸಿ ಸರ್ಕಾರ ಆದೇಶಿಸಿದೆ.

ಜನಸಾಮಾನ್ಯರಿಗೆ ತ್ವರಿತ, ಸರಳವಾಗಿ ಆಡಳಿತವನ್ನು ನೀಡುವ ಉದ್ದೇಶದಿಂದ ಕಂದಾಯ ಇಲಾಖೆಯಲ್ಲಿ ಏಕಕಡತ ನಿರ್ವಹಣೆ ವ್ಯವಸ್ಥೆ ಜಾರಿಗೊಳಿಸುವ ಅಗತ್ಯವಿದೆ. ಇದೇ ಕಾರಣಕ್ಕೆ ಈ ಕ್ರಮವಹಿಸಲಾಗಿದೆ ಎಂದು ಕಂದಾಯ ಇಲಾಖೆ (ಸೇವೆಗಳು-2) ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.

ಕಂದಾಯ ಗ್ರಾಮ ರಚನೆ ಕಡತಗಳು, ಪರಿಶಿಷ್ಟ ಜಾತಿ, ಪಂಗಡಗಳ ಮಂಜೂರಾದ ಭೂ ವರ್ಗಾವಣೆ ನಿಷೇಧ ಕಾಯ್ದೆ, ಜಿಲ್ಲಾ, ತಾಲೂಕು ಆಡಳಿತ ಸೌಧ, ನಾಡಕಚೇರಿ ಕಟ್ಟಡಗಳ ನಿರ್ಮಾಣ, ದುರಸ್ತಿ ಕಾಮಗಾರಿಗಳು, ಅನುದಾನ ಬಿಡುಗಡೆಗೆ ಸಂಬಂಧಿಸಿದವು ಸೇರಿ ಎಂಟು ಪ್ರಮುಖ ವಿಷಯಗಳನ್ನು ಏಕಕಡತ ಮಾದರಿಯಲ್ಲಿ ನಿರ್ವಹಿಸಲು ಸೂಚಿಸಲಾಗಿದೆ.

ಅಧಿಕಾರ ಪ್ರತ್ಯಾಯೋಜನೆ ಹೆಸರಿನಲ್ಲಿ ಆಯುಕ್ತಾಲಯಕ್ಕೆ ಸಿಎಂ, ಸಚಿವರು, ಸಚಿವ ಸಂಪುಟ ಸಭೆಗೆ ಮೀರಿದ ಅಧಿಕಾರವನ್ನು ನೀಡಲಾಗಿತ್ತು. ಕಾಯ್ದೆ-ನಿಯಮಗಳ ಪಾಲನೆ, ಜನರ ಹಿತದೃಷ್ಟಿಯಿಂದ ನಡೆಸಿದ ಹೋರಾಟಕ್ಕೆ ಜಯ ಲಭಿಸಿದೆ ಎಂದು ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net