ಡಿಜಿಟಲ್ ಪ್ರಾಬಲ್ಯದಲ್ಲಿ ಕೆನರಾ ಬ್ಯಾಂಕ್ ಸತತ ಎರಡನೇ ವರ್ಷ ನಂಬರ್ ಒನ್!

Canara Bank
Published on

ಬೆಂಗಳೂರು: ದೇಶದ ಮುಂಚೂಣಿ ಬ್ಯಾಂಕ್​ಗಳಲ್ಲಿ ಒಂದಾಗಿರುವ ಕೆನರಾ ಬ್ಯಾಂಕ್ ಇದೀಗ ಡಿಜಿಟಲಿ ಮತ್ತೊಮ್ಮೆ ನಂಬರ್ ಒನ್ ಎನಿಸಿಕೊಂಡಿದೆ. ಈ ಕುರಿತು ಬ್ಯಾಂಕ್​ನ ಅಧಿಕೃತ ಟ್ವಿಟರ್​ ಹ್ಯಾಂಡಲ್​ನಲ್ಲಿ ಘೋಷಣೆ ಮಾಡಿಕೊಳ್ಳಲಾಗಿದೆ.

ಕೆನರಾ ಬ್ಯಾಂಕ್​ 2022-23ನೇ ಸಾಲಿನಲ್ಲೂ ಡಿಜಿಟಲ್ ರ್ಯಾಂಕಿಂಗ್​ನಲ್ಲಿ ನಂ.1 ಸ್ಥಾನ ಗಳಿಸುವ ಮೂಲಕ ಸತತ ಎರಡನೇ ವರ್ಷ ಈ ಸಾಧನೆ ಮಾಡಿದಂತಾಗಿದೆ. ಖಾಸಗಿ ಹಾಗೂ ಸಾರ್ವಜನಿಕ ವಲಯದ ಎಲ್ಲ ಬ್ಯಾಂಕ್​ಗಳ ಪೈಕಿ ಕೆನರಾ ಬ್ಯಾಂಕ್​ ನಂ. 1 ಮೂಲಕ ಅಗ್ರಸ್ಥಾನದಲ್ಲಿದೆ.

ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅನುಸಾರ ಡಿಜಿಟಲ್ ಬ್ಯಾಂಕಿಂಗ್ ಮತ್ತು ವ್ಯಾಪಾರಿ ಸ್ವಾಧೀನದಲ್ಲಿ ಎಲ್ಲ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಕೆನರಾ ಬ್ಯಾಂಕ್ ಸತತ ಎರಡನೇ ವರ್ಷ ನಂ.1 ಸ್ಥಾನ ಪಡೆದುಕೊಂಡಿದೆ ಎಂದು ಟ್ವೀಟ್​ನಲ್ಲಿ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net