ಹೇಮಾವತಿ ಲಿಂಕ್ ಕೆನಾಲ್ ತಾಂತ್ರಿಕ ಸಮಿತಿ ರಚನೆ

Published on

ಬೆಂಗಳೂರು:
ಹೇಮಾವತಿ ಲಿಂಕ್ ಕೆನಾಲ್ ಮೂಲಕ ಮಾಗಡಿ ಹಾಗೂ ಕುಣಿಗಲ್ ತಾಲೂಕಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಶ್ರೀರಂಗ ಕೆರೆ ತುಂಬಿಸುವ ಯೋಜನೆಗೆ ನೀರು ಖಾತರಿ ಪಡಿಸುವ ಯೋಜನೆ ಅನುಷ್ಠಾನಕ್ಕೆ ತಾಂತ್ರಿಕ ಸಮಿತಿ ರಚಿಸಲಾಗಿದೆ.
ಈ ತಾಂತ್ರಿಕ ಸಮಿತಿಗೆ ನಿವೃತ್ತ ಮುಖ್ಯ ಅಭಿಯಂತರರಾದ ಅರವಿಂದ ಡಿ ಕಣಗಿಲೆ ಅವರು ಅಧ್ಯಕ್ಷರಾಗಿದ್ದು, ಅಧೀಕ್ಷಕ ಅಭಿಯಂತರರಾದ ಬಿ.ಸುವರ್ಣ ಅವರು ಸದಸ್ಯ ಕಾರ್ಯದರ್ಶಿ, ನಿವೃತ್ತ ಪ್ರಧಾನ ಅಭಿಯಂತರರಾದ ಕೆ.ಬಾಲಕೃಷ್ಣ, ನಿವೃತ್ತ ಮುಖ್ಯ ಅಭಿಯಂತರರಾದ ಶಂಕರೇಗೌಡ, ಎಂ.ಜಿ. ಶಿವಕುಮಾರ್ ಅವರು ಸದಸ್ಯರಾಗಿದ್ದಾರೆ.
ಜು.9ರಂದು ಸಂಜೆ 4ಕ್ಕೆ ಬೆಂಗಳೂರಿನ ಆನಂದರಾವ್ ವೃತ್ತದಲ್ಲಿರುವ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ಸಮಿತಿಯ ಮೊದಲ ಸಭೆ ನಡೆಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net