

ಜಿ-20 ಶೃಂಗಸಭೆಗೆ ಭಾರತಕ್ಕೆ ಆಗಮಿಸಿದ್ದ ಕೆನಾಡ ಪ್ರಧಾನಿ ಜಸ್ಟಿನ್ ಟ್ರುಡೊ ಸಭೆ ಮುಗಿಸಿ ಅವರು ಭಾನುವಾರ ಸಂಜೆ ಕೆನಾಡಕ್ಕೆ ಹೋಗಬೇಕಿತ್ತು. ಆದರೆ ತಮ್ಮ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಭಾರತದಲ್ಲಿ ಉಳಿಯುವಂತಾಗಿತ್ತು.
ಜಸ್ಟಿನ್ ಟ್ರುಡೊ ಅವರನ್ನು ಕರೆದುಕೊಂಡು ಹೋಗಲು ಬಂದಿದ್ದ CC-150 ಪೋಲಾರಿಸ್ ವಿಮಾನ ಲಂಡನ್ನಲ್ಲಿ ಇಳಿದಿದೆ. ಹಅಗಾಗಿ ಜಸ್ಟಿನ್ ಟ್ರುಡೊ ಮತ್ತೆ ಭಾರತದಲ್ಲಿ ಉಳಿದಿದ್ದು, ಭಾರತದಿಂದ ತೆರಳುವುದು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಎರಡು ದಿನಗಳು ಶೃಂಗಸಭೆಯನ್ನು ಮುಗಿಸಿ ಅವರು ಭಾನುವಾರ ಸಂಜೆ ಕೆನಡಾಕ್ಕೆ ಹೋಗಬೇಕಿತ್ತು. ಜಸ್ಟಿನ್ ಅವರನ್ನು ಕರೆದುಕೊಂಡು ಹೋಗಲು ಬಂದ ವಿಮಾನದಲ್ಲಿ ತಾಂತ್ರಿಕ ದೋಷ ಉಂಟಾಗಿದ್ದು, ಕೆನಡಾಕ್ಕೆ ಹೋಗಲು ಸಾಧ್ಯವಾಗದೇ ಭಾರತದಲ್ಲಿಯೇ ಉಳಿದಿದ್ದರು. ತದನಂತರ ಇದೀಗ ಸೋಮವಾರ ರಾತ್ರಿ 10 ಗಂಟೆಗೆ ಕೆನಾಡದಿಂದ ಎರಡನೇ ವಿಮಾನ ಭಾರತವನ್ನು ತಲುಪುವ ನಿರೀಕ್ಷೆಯಿತ್ತು. ಆದರೆ ಅದನ್ನು ಕೂಡ ಲಂಡನ್ನಲ್ಲಿ ಇಳಿಸಲಾಗಿದೆ.
2016ರಲ್ಲಿ, ಈ ವಿಮಾನವು ಬೆಲ್ಜಿಯಂಗೆ ಟೇಕ್ ಆಫ್ ಆದ ಅರ್ಧ ಗಂಟೆಯ ನಂತರ ಒಟ್ಟಾವಾಗೆ ಮರಳಿತು. ಆ ವಿಮಾನವು 16 ತಿಂಗಳುಗಳ ಕಾಲವರೆಗೆ ಯಾವುದೇ ಪ್ರಯಾಣವನ್ನು ಮಾಡಿಲ್ಲ ಎಂದು ಹೇಳಲಾಗಿದೆ. ಇನ್ನು ಈ ಬಗ್ಗೆ ಕೆನಾಡ ವಿರೋಧ ಪಕ್ಷದ ನಾಯಕ ಪಿಯರೆ ಪೊಯಿಲಿವ್ರೆ ಅವರು ಟೀಕಿಸಿದ್ದು, ಇದು ಅವರು ಅನುಭವಿಸಬೇಕಾದ ಸಂಕಷ್ಟ, ಇನ್ನು ಈ ಒತ್ತಡವನ್ನು ದೇಶದ ಜನರ ಮೇಲೆ ಹಾಕುತ್ತಾರೆ ಎಂದು ಹೇಳಿದ್ದಾರೆ.
ವಿಮಾನದ ವ್ಯವಸ್ಥೆಯಲ್ಲಿ ಉಂಟಾದ ಸಮಸ್ಯೆಯಿಂದ ಮತ್ತೆ ಭಾರತದಲ್ಲಿ ಉಳಿಯಬೇಕಾಗಿದೆ. ಅಲ್ಲಿಯವರೆಗೆ ನವದೆಹಲಿಯ ಲಲಿತ್ ಹೋಟೆಲ್‌ನಲ್ಲಿ ಉಳಿದುಕೊಳ್ಳಲಿದ್ದಾರೆ.
ಈ ವಿಮಾನ ಲಂಡನ್ನಲ್ಲಿ ತುರ್ತು ಲ್ಯಾಂಡ್ ಆಗಿದೆ ಎಂದು ಸಿಬಿಸಿ ನ್ಯೂಸ್ ವರದಿ ಮಾಡಿದೆ. ಆದರೆ ಈ ವಿಮಾನವನ್ನು ಲಂಡನ್ನಲ್ಲಿ ಇಳಿಸಲು ಕಾರಣ ಏನು? ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.