ಖ್ಯಾತ ಪಾಪ್ ಸಿಂಗರ್ ಜೊತೆ ಕೆನಡಾ ಮಾಜಿ ಪ್ರಧಾನಿ ಟ್ರುಡೋ ಡೇಟಿಂಗ್! | Justin Trudeau

Justin trudo
Published on

Justin Trudeau: ಜಾಗತಿಕ ಖ್ಯಾತ ಪಾಪ್ ಸಿಂಗರ್ ಕೇಟಿ ಪೆರ್ರಿ ಮತ್ತು ಕೆನಡಾ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೋ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದು, ರೆಸ್ಟೊರೆಂಟ್ ಒಂದರಲ್ಲಿ ಒಟ್ಟಿಗೆ ಕುಳಿತು ಊಟ ಮಾಡ್ತಿರುವ ವಿಡಿಯೋ ವೈರಲ್ ಆಗಿದೆ. ಇಬ್ಬರು ಡೇಟಿಂಗ್ ಮಾಡ್ತಿದ್ದಾರೆ ಎಂಬ ವದಂತಿಗಳು ಹಬ್ಬಿವೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ,  40 ವರ್ಷದ ಕೇಟಿ ಪೆರ್ರಿ ಮತ್ತು 53 ವರ್ಷದ ಜಸ್ಟಿನ್ ಟ್ರುಡೋ ಇಬ್ಬರು ಜು. 28ರಂದು ಕೆನಡಾದ ಮಾಂಟ್ರಿಯಲ್ ಪ್ರದೇಶದಲ್ಲಿರುವ ಲೆ ವಯೋಲನ್ ರೆಸ್ಟೋರೆಂಟ್​ನಲ್ಲಿ ಒಟ್ಟಿಗೆ ಕುಳಿತು ಊಟ ಮಾಡಿದ್ದು, ಸ್ವಲ್ಪ ಹೊತ್ತು ಇಬ್ಬರು ಆಳವಾದ ಮಾತುಕತೆಯಲ್ಲಿ ತೊಡಗಿದ್ದರು. ಬಳಿಕ ರೆಸ್ಟೋರೆಂಟ್​ನ ಅಡುಗೆ ಸಿಬ್ಬಂದಿಗೆ ಧನ್ಯವಾದ ಹೇಳಿ ಹೋಗಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.

ಈ ತಿಂಗಳ ಆರಂಭದಲ್ಲಿ ಕೇಟಿ ಪೆರ್ರಿ ತಮ್ಮ ಪತಿ  ಫೈರ್​ವರ್ಕ್ ಹಿಟ್ ಮೇಕರ್ ಒರ್ಲ್ಯಾಂಡೊ ಬ್ಲೂಮ್​ರಿಂದ ಬೇರ್ಪಟ್ಟು, ಡಿವೋರ್ಸ್ ನೀಡಿದ್ದನ್ನು ದೃಢಪಪಡಿಸಿದ್ದರು. ಸದ್ಯ ಪೆರ್ರಿ ತಮ್ಮ ಹೊಸ ಅಲ್ಬಂ 143 ಅನ್ನು ಪ್ರಚಾರ ಮಾಡುವ ಸಲುವಾಗಿ ಕೆನಡಾ ಪ್ರವಾಸದಲ್ಲಿದ್ದಾರೆ.

ಡಿವೋರ್ಸ್​ ನೀಡಿದ ಕೆಲವೇ ದಿನಗಳಲ್ಲಿ ಟ್ರುಡೋ ಜೊತೆ ಕಾಣಿಸಿಕೊಂಡಿದ್ದು ಹಲವು ಊಹಾಪೋಹಗಳು ಎದ್ದಿವೆ. ಕೇಟಿ ಪೆರ್ರಿ ಅಥವಾ ಜಸ್ಟಿನ್ ಟ್ರುಡೊ ಮಧ್ಯೆ ಏನು ನಡೆಯುತ್ತಿದೆ ಎಂಬುದರ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ವರದಿಗಳು ಉಲ್ಲೇಖಿಸಿವೆ.

ಕೇಟಿ ಪೆರ್ರಿ ಯಾರು?

ಕೇಟಿ ಪೆರ್ರಿ ಅಮೆರಿಕದ ಖ್ಯಾತ ಪಾಪ್ ಸಿಂಗರ್. ಪೂರ್ಣ ಹೆಸರು ಕ್ಯಾಥರಿನ್ ಎಲಿಜೆಬಿತ್ ಹಡ್ಸನ್. ಪ್ರಪಂಚದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯು ಸಿಂಗರ್​​ಗಳಲ್ಲಿ ಒಬ್ಬರು. 2016ರಲ್ಲಿ ಗೋಲ್ಡನ್ ಗ್ಲೋಬ್ಸ್​ ಆಫ್ಟರ್ ಪಾರ್ಟಿಯಲ್ಲಿ ಒರ್ಲ್ಯಾಂಡೋ ಬ್ಲೂಮ್​ರನ್ನ ಭೇಟಿಯಾಗಿದ್ದ ಪೆರ್ರಿ, 3 ವರ್ಷಗಳ ಬಳಿಕ 2019ರಲ್ಲಿ ಪ್ರೇಮಿಗಳ ದಿನದಂದು ವಿವಾಹವಾಗಿದ್ದರು. ಈ ದಂಪತಿಗೆ ಡೈಸಿ ಡವ್ ಎಂಬ ಮಗಳಿದ್ದಾಳೆ. ಕೆಲವೇ ದಿನಗಳ ಹಿಂದೆ ತಮ್ಮ 6 ವರ್ಷಗಳ ದಾಂಪತ್ಯಕ್ಕೆ ಅಂತ್ಯವಾಡಿದ್ದಾರೆ.

ಜಸ್ಟಿನ್ ಟ್ರುಡೋ

ಕೆನಡಾ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೋ, ಟಿವಿ ನಿರೂಪಕಿಯಾಗಿದ್ದ ಸೋಫಿ ಗ್ರೆಗೊಯಿರ್​ರನ್ನು ವಿವಾಹವಾಗಿದ್ದರು. ಈ ದಂಪತಿಗೆ ಕ್ಸೇವಿಯರ್ (17), ಎಲ್ಲಾ-ಗ್ರೇಸ್ (16) ಮತ್ತು ಹ್ಯಾಡ್ರಿಯನ್ (11) ಎಂಬ ಮೂವರು ಮಕ್ಕಳಿದ್ದಾರೆ. 2023 ಆಗಸ್ಟ್​ ತಿಂಗಳಲ್ಲಿ ಟ್ರುಡೋ ತಮ್ಮ 18 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯವಾಡಿ, ಪತ್ನಿಗೆ ಡಿವೋರ್ಸ್ ನೀಡಿದ್ದನ್ನು ಘೋಷಿಸಿದ್ದರು.

"ಎಲ್ಲರಿಗೂ ನಮಸ್ಕಾರ, ಸೋಫಿ ಮತ್ತು ನಾನು ಅನೇಕ ಅರ್ಥಪೂರ್ಣ ಮತ್ತು ಕಷ್ಟಕರವಾದ ಸಂಭಾಷಣೆಯ ನಂತರ, ನಾವು ಬೇರ್ಪಡುವ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂಬ ಅಂಶವನ್ನು ಹಂಚಿಕೊಳ್ಳಲು ಬಯಸುತ್ತೇವೆ. ಯಾವಾಗಲೂ ಹಾಗೆ, ನಾವು ಪರಸ್ಪರ ಮತ್ತು ನಾವು ನಿರ್ಮಿಸಿದ ಮತ್ತು ನಿರ್ಮಿಸುವುದನ್ನು ಮುಂದುವರಿಸುವ ಎಲ್ಲದರ ಬಗ್ಗೆ ಆಳವಾದ ಪ್ರೀತಿ ಮತ್ತು ಗೌರವವನ್ನು ಹೊಂದಿರುವ ನಿಕಟ ಕುಟುಂಬವಾಗಿ ಉಳಿದಿದ್ದೇವೆ. ನಮ್ಮ ಮಕ್ಕಳ ಯೋಗಕ್ಷೇಮಕ್ಕಾಗಿ, ನೀವು ನಮ್ಮ ಮತ್ತು ಅವರ ಗೌಪ್ಯತೆಯನ್ನು ಗೌರವಿಸಬೇಕೆಂದು ನಾವು ಕೇಳಿಕೊಳ್ಳುತ್ತೇವೆ. ಧನ್ಯವಾದಗಳು" ಎಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹಾಕಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net