ಸ್ಟಾರ್​​ ನಟಿಯರ ಮಧ್ಯೆ ನಿಂತಿರುವ ಈತ ಯಾರು? ಫೋಟೋ ನೋಡಿದ್ರೆ ಖಂಡಿತ ತಿಳಿಯಲ್ಲ, ಸುದ್ದಿ ಓದಿ!

ವಿಜಯವಾಣಿ - 2024-09-22T194819.398
Published on

ಬೆಂಗಳೂರು: ಸೆಲೆಬ್ರಿಟಿಗಳು ಅಂದರೆ ಹಾಗೆನೇ! ತಮ್ಮ ಪ್ರಾರಂಭದ ದಿನಗಳಲ್ಲಿ ದೊಡ್ಡ ಸ್ಟಾರ್​ಗಳೊಂದಿಗೆ ತೆಗೆಸಿಕೊಂಡ ಫೋಟೋಗಳು ಇಂದು ಎಲ್ಲರ ಗಮನಸೆಳೆಯುವ ಮೂಲಕ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತದೆ. ಅದೇ ರೀತಿ ಮೇಲ್ಕಂಡ ಫೋಟೋದಲ್ಲಿ ಕಾಣಿಸುತ್ತಿರುವ ವ್ಯಕ್ತಿ ಕೂಡ ಇಂದು ಚಿತ್ರರಂಗದಲ್ಲಿ ತಮ್ಮ ಹೆಸರನ್ನು ಭಾರೀ ವಿವಾದಗಳಿಂದಲೇ ಜನರ ತಲೆಯಲ್ಲಿ ಉಳಿಯುವಂತೆ ಮಾಡಿದ್ದಾರೆ. ಇದರೊಟ್ಟಿಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಆಗಾಗ್ಗೆ ಸುದ್ದಿಯಾಗುತ್ತಿರುತ್ತಾರೆ.

ಇಂದು ಅನೇಕರು ತಮ್ಮ ಹೊಸ ಕೆಲಸಗಳನ್ನು ಕೈಗೆತ್ತಿಕೊಳ್ಳುವ ಮೊದಲು ಜೋತಿಷ್ಯರನ್ನು ಸಂಪರ್ಕಿಸಿ, ಅವರು ನೀಡುವ ಸಲಹೆ, ಸೂಚನೆಗಳ ಮೇರೆಗೆ ಹೆಜ್ಜೆಯಿಡಲು ಮುಂದಾಗುತ್ತಾರೆ. ಇನ್ನೂ ಕೆಲವರು ಇದಕ್ಕೆ ತದ್ವಿರುದ್ಧವಾಗಿ ಇರುವುದು, ನಡೆದುಕೊಳ್ಳುವುದನ್ನು ನಾವು ಗಮನಿಸಿದ್ದೇವೆ. ಸಾಮಾನ್ಯ ಜನರ ಭವಿಷ್ಯಕ್ಕಿಂತ ರಾಜಕಾರಣಿ, ಸೆಲೆಬ್ರಿಟಿಗಳ ಭವಿಷ್ಯವಾಣಿಗಳು ಅವರಿಗಿಂತ ಅವರನ್ನು ಅನುಸರಿಸುವವರಿಗೆ ಹೆಚ್ಚು ಅಗತ್ಯವಿದೆಯೋ ಏನೋ ಎಂದು ನಮಗೆ ಕೆಲವೊಮ್ಮೆ ಅನಿಸಿದ್ದು ಉಂಟು!

ಪ್ರತ್ಯೇಕವಾಗಿ ಸ್ಟಾರ್​ ಕಲಾವಿದರ ಭವಿಷ್ಯ ನುಡಿಗಳು ಸಿಕ್ಕಾಪಟ್ಟೆ ಕುತೂಹಲಕ್ಕೂ ಕಾರಣವಾಗುತ್ತದೆ. ಫೋಟೋದಲ್ಲಿ ಸ್ಟಾರ್​ ಹಿರಿಯ ನಟಿ ನಗ್ಮಾ ಮತ್ತು ರಮ್ಯ ಕೃಷ್ಣನ್ ಮಧ್ಯೆ ನಿಂತಿರುವ ಈ ವ್ಯಕ್ತಿ ಯಾವ ಸ್ಟಾರ್​​ ನಟನೂ ಅಲ್ಲ, ಕಲಾವಿದನೂ ಅಲ್ಲ. ಬದಲಿಗೆ ಟಾಲಿವುಡ್​ನ ಹೆಸರಾಂತ ಜ್ಯೋತಿಷಿ. ಚಿತ್ರಪ್ರೇಮಿಗಳು ಆರಾಧಿಸುವ ತಮ್ಮ ನೆಚ್ಚಿನ ಸ್ಟಾರ್​ಗಳ ಭವಿಷ್ಯ ಹೇಳುವ ಈ ವ್ಯಕ್ತಿ, ಇಂದು ಸೋಷಿಯಲ್ ಮೀಡಿಯಾದಲ್ಲಿ ಪದೇ ಪದೇ ವಿವಾದಗಳಿಂದಲೇ ಸುದ್ದಿಯಾಗುತ್ತಿರುತ್ತಾರೆ.

ಫೋಟೋದಲ್ಲಿರುವ ವ್ಯಕ್ತಿಯ ಹೆಸರು ವೇಣು ಸ್ವಾಮಿ, ಇವರು ಟಾಲಿವುಡ್​ನ ಹೆಸರಾಂತ ಸೆಲೆಬ್ರಿಟಿ ಜೋತಿಷಿ. ಸೆಲೆಬ್ರಿಟಿಗಳ ಜೀವನದಲ್ಲಿ ಏನೆಲ್ಲಾ ನಡೆಯುತ್ತೆ ಅಂತ ಭವಿಷ್ಯ ನುಡಿಯುತ್ತಾರೆ. ಇವರು ಹೇಳುವ ಭವಿಷ್ಯಗಳು ಕೆಲವೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಕೂಡ ಹುಟ್ಟುಹಾಕಿವೆ. ಸದ್ಯ ಈ ಫೋಟೋ ನೋಡಿದವರೆಲ್ಲ ಇದು ಯಾವ ಸಂದರ್ಭದಲ್ಲಿ ಕ್ಲಿಕ್ಕಿಸಿರುವುದು ಎಂದು ವ್ಯಾಪಕವಾಗಿ ಪ್ರಶ್ನಿಸಿದ್ದಾರೆ. ಅಸಲಿಗೆ ಈ ಫೋಟೋ ಯಾವ ಸಮಯದಲ್ಲಿ ತೆಗೆದಿದ್ದು ಎಂಬುದಕ್ಕೆ ಹೀಗಿದೆ ನೋಡಿ ಉತ್ತರ.

ರಮ್ಯ ಕೃಷ್ಣನ್ ಮತ್ತು ನಗ್ಮಾ ಮಧ್ಯೆ ಪೂಜಾರಿ ವೇಷದಲ್ಲಿ ವೇಣು ಸ್ವಾಮಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ‘ಮುಗ್ಗುರು ಮೊನಗಲ್ಲು’ ಎಂಬ ಸಿನಿಮಾದಲ್ಲಿ ನಾಯಕಿಯರಾಗಿ ಈ ಇಬ್ಬರು ನಟಿಯರ ಜತೆ ರೋಜಾ ಕೂಡ ಆ್ಯಕ್ಟ್​ ಮಾಡಿದ್ದರು. ವಿಶೇಷವಾಗಿ ಈ ಚಿತ್ರದಲ್ಲಿ ಚಿರಂಜೀವಿ ತ್ರಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ವೈರಲ್ ಆಗಿರುವ ವೇಣು ಸ್ವಾಮಿ ಅವರ ಹಳೆಯ ಫೋಟೋ ಕೂಡ ಇದೇ ಸಂದರ್ಭದಲ್ಲಿ ತೆಗೆದಿರಬಹುದು ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net