ಕಿರೀಸಾವೆಯಲ್ಲಿ ಶಿಬಿರಾರ್ಥಿಗಳಿಂದ ಸ್ವಚ್ಛತಾ ಕಾರ್ಯ

IMG-20250406-WA0110
ಹಿರೀಸಾವೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ಶಿಬಿರದಲ್ಲಿ ಭಾನುವಾರ ಕಿರೀಸಾವೆ ಗ್ರಾಮದ ದೇವಸ್ಥಾನವನ್ನು ಶಿಭಿರಾರ್ಥಿಗಳು ಸ್ವಚ್ಛ ಮಾಡಿದರು.
Published on

ಹಿರೀಸಾವೆ: ಹೋಬಳಿಯ ಕಿರೀಸಾವೆ ಗ್ರಾಮದಲ್ಲಿ ಹಿರೀಸಾವೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೇಜನೆ ವಾರ್ಷಿಕ ಶಿಬಿರದಲ್ಲಿ ಆದಿಚುಂಚನಗಿರಿ ವೈದ್ಯಾಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ ಸೋಮವಾರ ಆರೋಗ್ಯ ಉಚಿತ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಎನ್‌ಎಸ್‌ಎಸ್ ಶಿಬಿರಾಧಿಕಾರಿ ಎಚ್.ಜೆ. ಹರೀಶ್ ಭಾನುವಾರ ತಿಳಿಸಿದರು.

ಶಿಬಿರದಲ್ಲಿ ಹೃದ್ರೋಗ, ಮಧುಮೇಹ, ನರರೋಗ, ಮೂತ್ರಪಿಂಡ, ಕ್ಯಾನ್ಸರ್, ಕೀಲು ಮೂಳೆ ಸೇರಿದಂತೆ ಹಲವು ರೋಗಗಳ ತಜ್ಞ ವೈದ್ಯರು ಜನರ ಆರೋಗ್ಯ ಪರೀಕ್ಷೆ ನಡೆಸಿ, ಉಚಿತವಾಗಿ ಚಿಕಿತ್ಸೆ ಮತ್ತು ಔಷಧಗಳನ್ನು ನೀಡಲಿದ್ದಾರೆ. ಇಸಿಜಿ ಮತ್ತು ರಕ್ತದ ಪರೀಕ್ಷೆಯನ್ನೂ ನಡೆಸಲಾಗುವುದು. ಸಾರ್ವಜನಿಕರು ಶಿಬಿರವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.

ಎನ್‌ಎಸ್‌ಎಸ್ ವಾರ್ಷಿಕ ಶಿಬಿರವನ್ನು ಶಾಸಕ ಸಿ.ಎನ್.ಬಾಲಕೃಷ್ಣ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸೇವಾ ಮನೋಭಾವ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಹಳ್ಳಿಯ ಜನರು ಶಿಬಿರಾರ್ಥಿಗಳಿಗೆ ಸಹಕಾರ ನೀಡುವ ಮೂಲಕ ಗ್ರಾಮದ ಸ್ವಚ್ಛತೆ ಬಗ್ಗೆ ಹೆಚ್ಚು ಗಮನಹರಿಸುವಂತೆ ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಲಕ್ಷ್ಮಣಗೌಡ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ ರಾಮೇಗೌಡ, ಸದಸ್ಯೆ ಚಂದ್ರಮ್ಮ, ಪಿಎಸಿಸಿಬಿ ಅಧ್ಯಕ್ಷ ಮಹೇಶ್, ನಿರ್ದೇಶಕ ಕೆಂಪೇಗೌಡ, ಗುತ್ತಿಗೆದಾರರಾದ ಬೋರೇಗೌಡ, ಲಿಂಗರಾಜು ಸೇರಿದಂತೆ ಗ್ರಾಮದ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net