ಕರಾವಳಿಗೆ ದುಬೈನಿಂದ ಬಂತು ಕರೊನಾ ಸುನಾಮಿ!

sunami may
Published on

ಮಂಗಳೂರು: ಕರಾವಳಿಯಲ್ಲಿ ಶುಕ್ರವಾರ ಒಂದೇ ದಿನ 21 ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 15 ಮಂದಿ ದುಬೈನಿಂದ ಇತ್ತೀಚೆಗೆ ವಿಮಾನದಲ್ಲಿ ಬಂದವರು ಎಂಬುದು ಖಚಿತವಾಗಿದೆ.

ಮಂಗಳೂರು ವಿಮಾನ ನಿಲ್ದಾಣಕ್ಕೆ ಮೇ 12ರಂದು ಆಗಮಿಸಿದ್ದ ಪ್ರಯಾಣಿಕರ ಪೈಕಿ 125 ಮಂದಿ ದ.ಕ. ಜಿಲ್ಲೆಯಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ. ಉಡುಪಿಯ 49 ಮಂದಿ ಹಾಗೂ ಉತ್ತರ ಕನ್ನಡದ 5 ಮಂದಿ ಆಯಾ ಜಿಲ್ಲೆಗೆ ತೆರಳಿ, ಕ್ವಾರಂಟೈನ್‌ಲ್ಲಿದ್ದಾರೆ.

ಇನ್ನೊಂದೆಡೆ, ಹಸಿರು ವಲಯದಲ್ಲಿ ಗುರುತಿಸಿಕೊಂಡಿರುವ ಉಡುಪಿ ಜಿಲ್ಲೆಗೂ ಕರೊನಾ ಶಾಕ್ ನೀಡಿದೆ. ದುಬೈನಿಂದ ಆಗಮಿಸಿದ್ದ ಜಿಲ್ಲೆಯ 49 ಮಂದಿ ಪೈಕಿ ಐವರಿಗೆ ಸೋಂಕು ದೃಢಪಟ್ಟಿದೆ. ಇವರನ್ನು ಪ್ರತ್ಯೇಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರ ಆರೋಗ್ಯ ತಪಾಸಣೆ, ಮುಂಜಾಗ್ರತಾ ಕ್ರಮಕ್ಕೆ ಜಿಲ್ಲಾಡಳಿತ ಮುತುವರ್ಜಿ ವಹಿಸಿದೆ.

ಮೇ 18ರಂದು ದುಬೈಯಿಂದ ಇನ್ನೊಂದು ವಿಮಾನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. 175 ಮಂದಿ ಆಗಮಿಸುವ ನಿರೀಕ್ಷೆ ಇದೆ. ಅದರಲ್ಲಿ ಬಂದವರ ಪೈಕಿ ಎಷ್ಟು ಜನರಿಗೆ ಕರೊನಾ ದೃಢಪಡುತ್ತೋ ಎಂಬ ಆತಂಕದಲ್ಲಿದ್ದಾರೆ ಜಿಲ್ಲೆಯ ಜನತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net