ಜಸ್ಟ್​​​ ಬಚಾವ್​​: ತನ್ನ ಪ್ರಾಣವನ್ನು ಲೆಕ್ಕಿಸದೇ ಮಗುವಿನ ಜೀವವನ್ನು ಉಳಿಸಿದ ತಾಯಿ

combodia
Published on

ಕಾಂಬೋಡಿಯಾ: ಮನೆಯ ಛಾವಣಿ ಕುಸಿಯುವ ಕೆಲವೇ ಕ್ಷಣಗಳ ಮೊದಲು ತಾಯಿ ತನ್ನ ಮಗುವನ್ನು ರಕ್ಷಿಸಿರುವ ಘಟನೆ ಕಾಂಬೋಡಿಯಾದದ ನಾಮ್ ಪೆನ್‌ನಲ್ಲಿ ನಡೆದಿದೆ.

ಈ ಘಟನೆಯು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪಿಪ್ ಸ್ರೇ ಎಂಬ ಮಹಿಳೆನ ಮನೆಯಲ್ಲಿಯೇ ಅಂಗಡಿಯನ್ನು ಇಟ್ಟುಕೊಂಡಿದ್ದಳು. ಅಂಗಡಿಯಲ್ಲಿ ಕೂತಿದ್ದ ವೇಳೆ ಒಂದು ಶಬ್ದವು ಕೇಳಿ ಬಂದಿದ್ದು, ಗಾಬರಿಗೊಂಡ ಮಹಿಳೆ ಕಂಕುಳಲ್ಲಿ ಒಂದು ಮಗುವನ್ನು ಎತ್ತಿಕೊಂಡು ತನ್ನಿಬ್ಬರ ಮಕ್ಕಳೊಂದಿಗೆ ಒಳಗೆ ಓಡಿ ಹೋಗಿದ್ದಾಳೆ.

ನಂತರ ಪ್ರಾಂಗಣದಲ್ಲಿದ್ದ ಮತ್ತೊಂದು ಮಗುವಿನ ನೆನಪಾಗಿದ್ದು, ಕೂಡಲೇ ತನ್ನ ಪ್ರಾಣವನ್ನು ಲೆಕ್ಕಿಸದೇ ಬೇಬಿ ವಾಕರ್‌ನಲ್ಲಿದ್ದ 9 ತಿಂಗಳ ಮಗುವಿನ ರಕ್ಷಣೆ ಮಾಡಿದ್ದಾಳೆ. ಇದಾದ ಕೆಲವೇ ಸೆಕೆಂಡುಗಳ ನಂತರ, ಪ್ರಾಂಗಣದಲ್ಲಿ ಮನೆಯ ಛಾವಣಿ ಕಳಚಿ ಬಿದ್ದಿದೆ. ಮನೆಯನ್ನು ಕಟ್ಟುವ ವೇಳೆ ವಾಟರ್ ಪ್ರೂಫಿಂಗ್ ವ್ಯವಸ್ಥೆ ಇರಲಿಲ್ಲ. ಮಳೆಯಿಂದಾಗಿ ಸೀಲಿಂಗ್ ದುರ್ಬಲವಾಗಿದ್ದು, ಕಳಚಿ ಬಿದ್ದಿದೆ ಎಂದು ಹೇಳಲಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net