

ಬೆಂಗಳೂರು:ಕರ್ತವ್ಯನಿರತ ಪಿಜಿ ವೈದ್ಯೆಯ ಮೇಲೆ ನಡೆದ ಅಮಾನುಷ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ, ಇಎಸ್‌ಐ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ರಾಜಾಜಿನಗರದ ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಆರ್.ಜಿ ಕರ್ ಆಸ್ಪತ್ರೆಯಲ್ಲಿ ನಡೆದ ಘಟನೆ ಇಡೀ ದೇಶವನ್ನು ಬೆಚ್ಚಿಬೀಳಿಸಿತ್ತು. ಈ ಹಿನ್ನೆಲೆಯಲ್ಲಿ ಇಲ್ಲಿನ ನಿವಾಸಿ ವೈದ್ಯರುಗಳು ಇಎಸ್‌ಐಸಿ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಪತ್ರಿಭಟನೆ ಹಮ್ಮಿಕೊಂಡಿರುದಾಗಿ ತಿಳಿಸಿದ್ದು, ಆರ್ ಜಿ ಕಾರ್‌ನಲ್ಲಿ ನಡೆದಿರುವುದು ನಮ್ಮ ಊಹೆಗೂ ನಿಲುಕದ್ದು, ವೈದ್ಯರಿಗೆ ಅವರದೇ ಆಸ್ಪತ್ರೆಗಳಲ್ಲಿ ಸುರಕ್ಷತೆ ಇಲ್ಲದಿದ್ದರೆ, ಈ ದೇಶದಲ್ಲಿ ಸುರಕ್ಷತೆ ಯಾರಿಗೆ ಖಾತ್ರಿಯಾಗಿದೆ? ಇದು ಈಗ ವೈದ್ಯರ ಸಮಸ್ಯೆ ಮಾತ್ರವಲ್ಲ, ದೇಶದ ಜನರ ಸಮಸ್ಯೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಚಳವಳಿಯನ್ನು ನಾವು ಬಲಪಡಿಸಬೇಕಾಗಿದೆ. ಆರ್ ಜಿ ಕಾರ್ ನಲ್ಲಿ ನಡೆದದ್ದು ಮರುಕಳಿಸಬಾರದು. ಈ ಬಿಕ್ಕಟ್ಟಿನ ಸಮಯದಲ್ಲಿ ಇಡೀ ವೈದ್ಯಕೀಯ ಕ್ಷೇತ್ರ ಈ ಕೂಡಲೇ ಆಕೆಗೆ ನ್ಯಾಯ ಸಿಗಬೇಕೆಂದು ಆಗ್ರಹಿಸುತ್ತಾ ಹಲವು ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.