ಸಂಪುಟ ವಿಸ್ತರಣೆ ನನ್ನ ವ್ಯಾಪ್ತಿಯಲ್ಲಿಲ್ಲ ಎಂದ ಸಚಿವ ಭೈರತಿ ಬಸವರಾಜು

Published on

ಬೆಂಗಳೂರು: ಸಂಪುಟ ವಿಸ್ತಣೆ ಮಾಡುವುದು ನನ್ನ ವ್ಯಾಪ್ತಿಯಲ್ಲಿಲ್ಲ, ಅದರ ಬಗ್ಗೆ ಉತ್ತರಿಸಲು ಹೋಗುವುದಿಲ್ಲ ಎಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳ ವೀಕ್ಷಣೆ ನಂತರ ಸುದ್ದಿಗೋಷ್ಠಿಯಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಹೇಳಿದರು.

ಪ್ರಾರಂಬದಲ್ಲಿ ಮರಾಠಾ ಸಮುದಾಯ ಅಭಿವೃದ್ಧಿ ಪ್ರಾಧಿಕಾರದ ಬಗ್ಗೆ ಪ್ರತಿಕ್ರಿಯಿಸಿ, ಅದು ಮರಾಠಿ ನಿಗಮ ಅಲ್ಲ. ಮರಾಠಾ ಜನರ ಹಿತದೃಷ್ಟಿಯಿಂದ ಮುಖ್ಯಮಂತ್ರಿಯವರು ಮಾಡಿದ್ದಾರೆ. ಬೆಂಗಳೂರಿನಲ್ಲೂ ಸಾಕಷ್ಟು ಮರಾಠರಿದ್ದಾರೆ. ಅವರ ಅಭಿವೃದ್ಧಿ ಬಿಟ್ಟರೆ, ಭಾಷೆಯ ತಾರತಮ್ಯ ಇಲ್ಲ. ನಾವು ಎಂದಿಗೂ ಕನ್ನಡದ ಪರವಾಗಿದ್ದೇವೆ. ಕನ್ನಡಕ್ಕೆ ಧಕ್ಕೆ ಬಂದರೆ ಕನ್ನಡದ ಪರ ನಿಲ್ಲಲು ಹಿಂಜರಿಯುವುದಿಲ್ಲ ಎಂದರು. ಇತರೆ ಸಮುದಾಯಗಳಲ್ಲೂ ಹಿಂದುಳಿದವರಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಹೇಳಿದ್ದಾರೆ ಎಂದರು.

ಸಂಪುಟ ವಿಸ್ತರಣೆ ಬಗ್ಗೆ ಪ್ರಶ್ನೆಗೆ ಉತ್ತರಿಸುತ್ತ, ನಾನು ದಾವಣಗೆರೆ ಉಸ್ತುವಾರಿ ಸಚಿವನಾಗಿ ಎಷ್ಟು ಪ್ರವಾಸ ಮಾಡಿದ್ದೇನೆ, ಏನು ಅಭಿವೃದ್ಧಿಯಾಗುತ್ತಿದೆ ಎಂದು ಕೇಳಿ, ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆ ಕೇಳಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಕ್ರಮದ ಬಗ್ಗೆ ಕೇಳಿದರೆ ಉತ್ತರ ನೀಡುತ್ತೇನೆ. ಸಚಿವ ಸಂಪುಟದ ಬಗ್ಗೆ ಮುಖ್ಯಮಂತ್ರಿಯವರು ಹಾಗೂ ನಮ್ಮ ಪಕ್ಷದ ಮುಖಂಡರು ಕೈಗೊಳ್ಳುತ್ತಾರೆ. ಅದು ನನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net