

ನವದೆಹಲಿ: 2024ರ ಖಾರಿಫ್ ಸೀಸನ್ನ ಪೋಷಕಾಂಶ ಆಧಾರಿತ ಸಬ್ಸಿಡಿ (NBS) ದರಗಳನ್ನು ಫಾಸ್ಫೇಟಿಕ್ ಮತ್ತು ಪೊಟಾಸಿಕ್ (P&K) ರಸಗೊಬ್ಬರಗಳ ಮೇಲೆ ಏಪ್ರಿಲ್ 1ರಿಂದ ಸೆಪ್ಟೆಂಬರ್ 30ರವರೆಗೆ ಮತ್ತು ಎನ್‌ಬಿಎಸ್ (NBS) ಯೋಜನೆಯಡಿಯಲ್ಲಿ 3 ಹೊಸ ರಸಗೊಬ್ಬರ ಶ್ರೇಣಿಗಳನ್ನು ಸೇರಿಸುವ ಪ್ರಸ್ತಾವನೆಯನ್ನು ಇಂದು (ಫೆ. 29ರಂದು) ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ.
2024ರ ಖಾರಿಫ್ ಸೀಸನ್‌ಗೆ ತಾತ್ಕಾಲಿಕ ಆಯವ್ಯಯ ಅಗತ್ಯವು ಸರಿಸುಮಾರು 24,420 ಕೋಟಿ ರೂ.ಗಳಾಗಿರುತ್ತದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು. ಕೇಂದ್ರವು ರಸಗೊಬ್ಬರ ತಯಾರಕರು ಅಥವಾ ಆಮದುದಾರರ ಮೂಲಕ ರೈತರಿಗೆ ಸಬ್ಸಿಡಿ ಬೆಲೆಯಲ್ಲಿ 25 ದರ್ಜೆಯ ಪಿ ಅಂಡ್ ಕೆ (P&K) ರಸಗೊಬ್ಬರಗಳನ್ನು ಲಭ್ಯವಾಗುವಂತೆ ಮಾಡುತ್ತಿದೆ.
ಈ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ಎನ್‌ಬಿಎಸ್ ಯೋಜನೆಯಿಂದ ನಿಯಂತ್ರಿಸಲಾಗುತ್ತದೆ. ಯೂರಿಯಾ, ಡಿಎಪಿ, ಎಂಒಪಿ ಮತ್ತು ಸಲ್ಫರ್‌ಗಳ ಅಂತಾರಾಷ್ಟ್ರೀಯ ಬೆಲೆಗಳಲ್ಲಿನ ಇತ್ತೀಚಿನ ಪ್ರವೃತ್ತಿಗಳ ದೃಷ್ಟಿಯಿಂದ, ಖಾರಿಫ್ 2024ಕ್ಕೆ ಸರ್ಕಾರವು ಎನ್‌ಬಿಎಸ್ ದರಗಳನ್ನು ಅನುಮೋದಿಸಲು ನಿರ್ಧರಿಸಿದೆ,(ಏಜೆನ್ಸೀಸ್).