

ಹೈದರಾಬಾದ್: ಸೋಶಿಯಲ್ ಮೀಡಿಯಾದಲ್ಲಿ ದಿನವೂ ಅಚ್ಚರಿಯ ಸುದ್ದಿಗಳನ್ನು ನೋಡುತ್ತಲೇ ಇದ್ದೇವೆ. ಇತ್ತೀಚೆಗಷ್ಟೇ ಕ್ಯಾಬ್ ಚಾಲಕನೊಬ್ಬ (Cab Driver ) ತನ್ನ ಕ್ಯಾಬ್‌ನಲ್ಲಿ ಭಿತ್ತಿಪತ್ರವನ್ನು ಅಂಟಿಸಿದ್ದಾನೆ. ಇದೀಗ ಅದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ
ಹೈದರಾಬಾದ್‌ನಲ್ಲಿ ಕ್ಯಾಬ್ ಚಾಲಕನೊಬ್ಬ ತನ್ನ ಕಾರಿನಲ್ಲಿ ಪೋಸ್ಟರ್ ಹಾಕಿದ್ದಾನೆ. "ಎಚ್ಚರಿಕೆ.. ನೋ ರೊಮ್ಯಾನ್ಸ್.. ಇದು ಕ್ಯಾಬ್.. ಇದು ಖಾಸಗಿ ಸ್ಥಳ ಅಥವಾ ಓಯೋ ಅಲ್ಲ.. ದಯವಿಟ್ಟು ಅಂತರವನ್ನು ಕಾಯ್ದುಕೊಳ್ಳಿ ಮತ್ತು ಮೌನವಾಗಿ ಕುಳಿತುಕೊಳ್ಳಿ" ಎಂದು ಪೋಸ್ಟರ್ ಬರೆಯಲಾಗಿದೆ.
ಹಿಂಬದಿ ಸೀಟಿನಲ್ಲಿ ಕುಳಿತವರಿಗೆ ಸ್ಪಷ್ಟವಾಗಿ ಕಾಣುವಂತೆ ಈ ಪೋಸ್ಟರ್ ಅರೇಂಜ್ ಮಾಡಿದ್ದಾರೆ. ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಈ ಪೋಸ್ಟರ್ನ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು, ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ಈ ಫೋಟೋಗಳನ್ನು ನೋಡಿದ ನೆಟಿಜನ್‌ಗಳು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ಇಷ್ಟೆಲ್ಲಾ ನೋಡಿದ ಮೇಲೆ... ಸಹಿಸಲಾರದೆ ಈ ಎಚ್ಚರಿಕೆ ನೀಡಿದ್ದಾರೆ. ನನಗೆ ಗೊತ್ತಿಲ್ಲ ಬಾಬು, ನಾನು ಈ ಊರಿಗೆ ಹೊಸಬ! ಎಂದು ನೆಟಿಜನ್ ಕಾಮೆಂಟ್ ಮಾಡಿದ್ದಾರೆ.