

ಬೆಂಗಳೂರು:
ರಾಜ್ಯದಲ್ಲಿ ನಡೆಯುತ್ತಿರುವ ಮೂರು ಉಪ ಚುನಾವಣೆಗಳು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸವಾಲಾಗಿದ್ದು, ಬಿಜೆಪಿ ಪಾಳೇಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿದ ಬಳಿಕ ಬಿಜೆಪಿ ಅಧ್ಯಕ್ಷ ಪಟ್ಟಕ್ಕೆ ಬಂದ ವಿಜಯೇಂದ್ರ ಅವರಿಗೆ, ಕಳೆದ ಲೋಕಸಭೆ ಚುನಾವಣೆ ಅಗ್ನಿ ಪರೀಕ್ಷೆಯಾಗಿತ್ತು. ಪಕ್ಷದೊಳಗಿನ ವೈರುದ್ಯಗಳ ವಿರುದ್ದ ಈಜುತ್ತಲೇ ಸಂಘಟನೆಗೆ ಮುಂದಾಗಿ ಕಡಿಮೆ ಅವಧಿಯಲ್ಲಿ ಲೋಕಸಭೆಯಲ್ಲಿ ಉತ್ತಮ ಲಿತಾಂಶ ಪಡೆಯಲು ಸಾಧ್ಯವಾಗಿದ್ದು ಅವರ ಸಂಘಟನಾ ಶಕ್ತಿಗೆ ಹಿಡಿದ ಕನ್ನಡಿ.
ಅಧ್ಯಕ್ಷರಾದ ಅವಧಿಯಿಂದಲೂ ಅವರ ಪಕ್ಷದೊಳಗೆ ಕೆಲ ಹಿರಿಯ ನಾಯಕರು ಕಾಲೆಳೆಯುತ್ತಲೇ ಬಂದಿದ್ದರೂ, ಅದನ್ನು ದಾಟಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡ ಬಿವೈವಿ, ಉಪ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವತ್ತ ಗಮನ ಕೇಂದ್ರೀಕರಿಸಿದ್ದರು.
ಶಿಗ್ಗಾವಿ, ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಮತ್ತು ಚನ್ನಪಟ್ಟಣ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲ್ಲಿಸಲು ವಿಜಯೇಂದ್ರ ಅಂಡ್ ಟೀಮ್ ಅವಿರತವಾಗಿ ಹೋರಾಟ ಮಾಡಿದೆ. ಅಷ್ಟೆ ಅಲ್ಲದೆ, ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಹಿರಿಯ ನಾಯಕರು ಪ್ರತಿ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಪ್ರಚಾರ ಮಾಡಿದ್ದಾರೆ. ಒಂದು ತಂಡವಾಗಿ ಬಿಜೆಪಿಯನ್ನು ಮುನ್ನೆಡೆಸಲು ವಿಜಯೇಂದ್ರ ಅವರು ನಡೆಸಿರುವ ಪ್ರಯತ್ನಕ್ಕೆ ಉಪ ಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ಲ ಸಿಗಲಿದೆ ಎನ್ನುವುದನ್ನು ಕಾದು ನೋಡಬೇಕು.
ಮೂರು ಕ್ಷೇತ್ರಗಳ ಪೈಕಿ ಶಿಗ್ಗಾವಿ ಗೆದ್ದೆ ಗೆಲ್ಲುತ್ತೇವೆ ಎನ್ನುವ ಉಮೇದಿನಲ್ಲಿ ಬಿಜೆಪಿ ಇದೆ. ಇನ್ನು ಸಂಡೂರಿನಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಮತದಾರರು ಯಾವ ರೀತಿಯ ತೀರ್ಪು ನೀಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕು.
ಒಂದು ಸ್ಥಾನ ಗೆದ್ದರೆ ಸಮಾಧಾನ. ಒಂದಕ್ಕಿಂತ ಹೆಚ್ಚು ಸ್ಥಾನ ಬಿಜೆಪಿಗೆ ಲಭ್ಯವಾದರೆ ಅದು ವಿಜಯೇಂದ್ರ ಅವರ ನಾಯಕತ್ವದ ಯಶಸ್ವು ಎನ್ನುವ ಮಾತು ಈಗಲೇ ಕೇಳಿ ಬರಲಾರಂಭಿಸಿವೆ. ಒಂದು ಬಿಜೆಪಿ ಮತ್ತೊಂದು ಎನ್‌ಡಿಎ ಅಭ್ಯರ್ಥಿ ಗೆದ್ದರೂ ಕೂಡ ಅದರ ಯಶಸ್ವಿನ ಹಿಂದೆ ವಿಜಯೇಂದ್ರ ಅವರ ನೆರಳು ಇರಲಿದೆ ಎಂದು ಅರ್ಥೈಯಿಸಲಾಗುತ್ತಿದೆ.