

ಬೆಂಗಳೂರು: ತುಮಕೂರಿನ ಶಿರಾ ಮತ್ತು ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಇಂದು ಪ್ರಕಟಿಸಿದ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಚಟುವಟಿಕೆಗಳು ಗರಿಗೆದರಿವೆ.
ರಾಜರಾಜೇಶ್ವರಿ ಕ್ಷೇತ್ರದಲ್ಲಿ ಮುನಿರತ್ನ ಅವರಿಗೆ ಟಿಕೆಟ್ ಪಕ್ಕಾ ಎಂದು ಹೇಳಲಾಗುತ್ತಿದ್ದರೂ ತುಳಸಿಮುನಿರಾಜಗೌಡ ಅವರೂ ಆಕಾಂಕ್ಷಿ ಹೌದು. ಮುನಿರತ್ನ ಅವರಿಗೆ ಟಿಕೆಟ್ ನೀಡುವುದನ್ನು ಮುನಿರಾಜು ವಿರೋಧಿಸಿದ್ದಾರೆ. ಈ ಕುತೂಹಲದ ಮಧ್ಯೆಯೇ ಸಚಿವ ಡಾ. ಸುಧಾಕರ್ ಅವರು ಮುನಿರತ್ನ ಪರ ಮಾತನಾಡಿದ್ದಾರೆ.
ಈ ಸರ್ಕಾರ ಮತ್ತು ಬಿಜೆಪಿ ಪಕ್ಷಕ್ಕಾಗಿ ಮುನಿರತ್ನ ದೊಡ್ಡ ಕೊಡುಗೆಯನ್ನೇ ಕೊಟ್ಟಿದ್ದಾರೆ. ಅವರಿಗೆ ಆರ್ಆರ್ ನಗರ ಟಿಕೆಟ್ ವಿಚಾರದಲ್ಲಿ ಅನ್ಯಾಯ ಆಗೋದಿಲ್ಲ. ಮುನಿರತ್ನ ಅವರು ಸಲೀಸಾಗಿ, ಹೆಚ್ಚಿನ ಮತಗಳೊಂದಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾರೆ ಎಂದು ಸುಧಾಕರ್ ಹೇಳಿದ್ದಾರೆ. ಇದನ್ನೂ ಓದಿ: ಕರೊನಾ ಸೋಂಕಿಗೆ ಆಯುರ್ವೇದ ಚಿಕಿತ್ಸೆ? ಕ್ಲಿನಿಕಲ್ ಟ್ರಯಲ್ನಿಂದ ಹೊರಬಿತ್ತು ಅಚ್ಚರಿಯ ಫಲಿತಾಂಶ
ನಾವೆಲ್ಲರೂ ಪಕ್ಷಕ್ಕೆ ಬರುವಾಗ ಕೆಲವೊಂದು ಭರವಸೆಗಳನ್ನು ಕೊಟ್ಟಿದ್ದರು. ಅದನ್ನು ಖಂಡಿತ ಪಕ್ಷ ಈಡೇರಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಉಪಚುನಾವಣೆ ದಿನಾಂಕ ಘೋಷಣೆ ಆದ ಹಿನ್ನೆಲೆಯಲ್ಲಿ ಆರ್ಆರ್ ಕ್ಷೇತ್ರ ಟಿಕೆಟ್ ಆಕಾಂಕ್ಷಿಯಾಗಿರುವ ಮುನಿರತ್ನ ಅವರು ನಾಳೆ (ಸೆ.30) ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿಯಾಗಲಿದ್ದಾರೆ.