ಉಪ ಚುನಾವಣೆಗಳ ಹಿನ್ನೆಲೆ ಭಣಗುಡುತ್ತಿರುವ ಶಕ್ತಿ ಸೌಧ ಪ್ರಚಾರದತ್ತ ಸಚಿವರುಗಳ ಚಿತ್ತ

Published on

ಬೆಂಗಳೂರು:

ಸಂಡೂರು, ಚನ್ನಪಟ್ಟಣ ಮತ್ತು ಶಿಗ್ಗಾವಿ ವಿಧಾನಸಭೆ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆ ಹಿನ್ನೆಲೆಯಲ್ಲಿ ಸಚಿವರುಗಳ ಚಿತ್ತ ಪ್ರಚಾರದತ್ತ ಹೊರಳಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವರುಗಳ ತಂಡವೇ ಉಪ ಚುನಾವಣೆಯಲ್ಲಿ ತೊಡಗಿಸಿಕೊಂಡಿದೆ. ಇನ್ನೊಂದೆಡೆ ಪಕ್ಷದ ಜವಬ್ದಾರಿನ್ನು ನಿಭಾಯಿಸುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಶಾಸಕರುಗಳು ಮತ್ತು ಮುಖಂಡರುಗಳು ಉಪ ಚುನಾವಣೆ ಪ್ರಚಾರದಲ್ಲಿದ್ದಾರೆ.

ವಿಧಾನಸೌಧ ಮತ್ತು ವಿಕಾಸಸೌಧಕ್ಕೆ ಸಚಿವರುಗಳು ಬಾರದ ಹಿನ್ನೆಲೆಯಲ್ಲಿ ಶಕ್ತಿ ಸೌಧವಾದಗಳು ಭಣಗುಡುತ್ತಿವೆ. ಸೋಮವಾರವೂ ಶಕ್ತಿ ಸೌಧದ ಕಡೆಗೆ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ಹೊರತುಪಡಿಸಿ ಇನ್ನುಳಿದ ಯಾವ ಸಚಿವರು ಮುಖ ಮಾಡಲಿಲ್ಲ.

ದೀಪಾವಳಿ ಹಬ್ಬದ ಸಂಭ್ರಮ ಮುಗಿದ ಬೆನ್ನಲ್ಲಿಯೇ 3 ಕ್ಷೇತ್ರಗಳ ಪ್ರಚಾರದ ಭರಾಟೆಯೂ ಹೆಚ್ಚಾಗಿದೆ. ಚುನಾವಣೆ ಪ್ರಚಾರ ಮುಗಿಯುವ ತನಕ ವಿಧಾನಸೌಧದ ಕಡೆಗೆ ಸಚಿವರು ಮತ್ತು ಶಾಸಕರುಗಳು ಬರುವುದು ಅಪರೂಪ. ಬಂದರೂ ಕೆಲಸಗಳು ಆಗುವುದಿಲ್ಲ ಎನ್ನುವ ಕಾರಣಕ್ಕೆ ಜನರೂ ಬರುವುದು ಕಡಿಮೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net