ದುಡ್ಡು ಕೊಟ್ಟರಷ್ಟೇ ರಾಗಿ ಖರೀದಿ?

2
ಖರೀದಿ ಅಧಿಕಾರಿ ಕೃಷ್ಣಪ ಕಳಪೆ ರಾಗಿ ಪ್ರದಶಿಸುತ್ತಿರುವ ರೈತ ಉದಯಕುಮಾರ್​.
Published on

ಹುಳಿಯಾರು ನಫೆಡ್​ ಕೇಂದ್ರದಲ್ಲಿ ಅಕ್ರಮ? - ಅಧಿಕಾರಿಗಳ ವಿರುದ್ಧ ರೈತರ ಆರೋಪ

ಹುಳಿಯಾರು: ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸುವ ಸಲುವಾಗಿ ಸರ್ಕಾರ ಹುಳಿಯಾರು ಎಪಿಎಂಸಿಯಲ್ಲಿ ನಫೆಡ್​ ಕೇಂದ್ರ ಆರಂಭಿಸಿದೆ. ಆದರೆ ನಫೆಡ್​ ಕೇಂದ್ರದಲ್ಲಿ ಎಲ್ಲದಕ್ಕೂ ದುಡ್ಡು ಕೇಳುತ್ತಿದ್ದು, ದುಡ್ಡು ಕೊಟ್ಟರೆ ಮಾತ್ರ ರಾಗಿ ಖರೀದಿಸುವ ವಾತಾವರಣ ನಿಮಾರ್ಣವಾಗಿದೆ. ಈ ಬಗ್ಗೆ ಮೇಲಧಿಕಾರಿಗಳಿಗೆ ದೂರವಾಣಿ ಮೂಲಕ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ರಾಗಿ ಬೆಲೆ 3 ಸಾವಿರ ರೂಪಾಯಿಗೂ ಕಡಿಮೆ ಇರುವುದರಿಂದ ಸರ್ಕಾರ 4,290 ರೂ. ಬೆಂಬಲ ಬೆಲೆ ಘೋಷಿಸಿ ರೈತನ ನೆರವಿಗೆ ಧಾವಿಸಿತು. ರೈತ ರಾಗಿ ಕೊಯ್ಲು ಮುಗಿಸಿ ಚೀಲದಲ್ಲಿ ತುಂಬಿ ರಾಗಿ ಮಾರಲು ಕಾಯುತ್ತಿದ್ದರೂ ತಿಂಗಳಾನುಗಟ್ಟಲೆ ನೋಂದಣಿ ಪ್ರಕ್ರಿಯೆಯಲ್ಲೇ ದಿನ ದೂಡುತ್ತಿತ್ತು. ರೈತ ಸಂಘ ಸೇರಿ ಜನಪ್ರತಿನಿಧಿಗಳು ಒತ್ತಡ ಹೇರಿದ ಪರಿಣಾಮ ಮಾರ್ಚ್​ ಮೊದಲ ವಾರದಲ್ಲಿ ಖರೀದಿ ಆರಂಭಿಸಲಾಯಿತು. ಆರಂಭದಲ್ಲೇ ಖರೀದಿ ಕೇಂದ್ರದಲ್ಲಿ ಕುರುಡು ಕಾಂಚಾಣ ಕುಣಿಯುತ್ತಿತ್ತು. ಇದನ್ನು ಗಮನಿಸಿದ ರೈತ ಸಂಘ ರೈತರಿಂದ ಹಣ ವಸೂಲಿ ಮಾಡದಂತೆ ಖುದ್ದು ಖರೀದಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಬಂದಿತ್ತು. ಆದರೂ ಇಲ್ಲಿನ ದಂಧೆಗೆ ಕಡಿವಾಣ ಬಿದ್ದಿಲ್ಲ ಎಂದು ರೈತರೇ ಆರೋಪಿಸುತ್ತಿದ್ದಾರೆ.

ಕಾಸಿಲ್ಲದಿದ್ದರೆ ಎಲ್ಲವೂ ರಿಜೆಕ್ಟ್​

ಪ್ರತಿಯೊಂದಕ್ಕೂ ಇಲ್ಲಿನ ನೆಡ್​ ಕೇಂದ್ರದಲ್ಲಿ ದುಡ್ಡು ಕೊಡಬೇಕಿದೆ. ದುಡ್ಡು ಕೊಟ್ಟರೆ ಕಳಪೆ ರಾಗಿಯೂ ಇಲ್ಲಿ ಖರೀದಿ ಆಗುತ್ತಿದೆ. ದುಡ್ಡು ಕೊಡದಿದ್ದರೆ ಗುಣಮಟ್ಟದ ರಾಗಿಗೂ ಸಬೂಬು ಹೇಳಿ ರಿಜೆಕ್ಟ್​ ಮಾಡುತ್ತಾರೆ. ಈ ಬಗ್ಗೆ ಮೇಲಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನ ಆಗಿಲ್ಲ. ಅಲ್ಲದೆ ಕೆಲ ಅಧಿಕಾರಿಗಳು ಪೋನ್​ ಪಿಕ್​ ಮಾಡೋದೇ ಇಲ್ಲ. ಈ ಬೆಳವಣಿಗೆ ಈ ದಂಧೆಯಲ್ಲಿ ಅಧಿಕಾರಿಗಳೂ ಶಾಮಿಲಾಗಿರುವ ಅನುಮಾನ ಕಾಡುತ್ತಿದೆ ಎಂದು ರೈತರು ಆರೋಪಿಸುತ್ತಾರೆ.

ರಾಗಿ ಜತೆ ಅಕ್ಕಿ ಇದು ಸೊಸೈಟಿ ರಾಗಿನೇ!

ಹುಳಿಯಾರು ರಾಗಿ ಖರೀದಿ ಕೇಂದ್ರದಲ್ಲಿ ದುಡ್ಡು ಪಡೆದು ಕಳಪೆ ರಾಗಿ ಖರೀದಿಸುತ್ತಿದ್ದಾರೆ. ಬೇಕಿದ್ದರೆ ನೋಡಿ ಎಂದು ಅಲ್ಲಿ ಬಿದ್ದಿದ್ದ ಹಿಡಿರಾಗಿಯನ್ನು ಬುಧವಾರ ರೈತರೊಬ್ಬರು ಪ್ರದರ್ಶಿಸಿದರು. ರಾಗಿ ಒಳಗೆ ಅಕ್ಕಿ ಹೇಗೆ ಬರುತ್ತೆ ಸಾರ್​? ರಾಗಿ ಅಕ್ಕಿ ಒಟ್ಟಿಗೆ ಬೆಳೆಯುತ್ತಾರೆಯೇ ಎಂದು ಪ್ರಶ್ನಿಸಿ, ನೂರಕ್ಕೆ ನೂರು ಇದು ಸೊಸೈಟಿ ರಾಗಿ ಸಾರ್​. ಕಾರ್ಡ್​ದಾರರಿಂದ ಕಡಿಮೆ ಬೆಲೆಗೆ ಖರೀದಿಸಿ ನಫೆಡ್​ಗೆ ಹೆಚ್ಚು ಬೆಲೆಗೆ ಬಿಡುತ್ತಾರೆ. ಪುನ@ ಇದೇ ರಾಗಿ ಸೊಸೈಟಿ ಮೂಲಕ ಪುಕ್ಕಟೆಯಾಗಿ ಕಾರ್ಡ್​ದಾರರಿಗೆ ನೀಡುತ್ತಾರೆ. ಮತ್ತೆ ನಫೆಡ್​ ಮೂಲಕ ಸೊಸೈಟಿಗೆ ಹೋಗುತ್ತದೆ. ಇದೊಂದು ದುಡ್ಡು ಮಾಡುವ ದಂಧೆ ಸಾರ್​ ಎನ್ನುತ್ತಾರೆ ರೈತರು.

ಹುಳಿ ಯಾರು ರಾಗಿ ಖರೀದಿ ಕೇಂದ್ರದಲ್ಲಿ ಯಾರೊ ಬ್ಬರೂ ದುಡ್ಡು ಕೇಳುವುದಿಲ್ಲ. ಅಲ್ಲದೆ ರಾಗಿ ಎಂದ ಮೇಲೆ ಒಂದಿಷ್ಟು ಕಸಕಡ್ಡಿ ಇದ್ದೇ ಇರುತ್ತದೆ. ಗುಣಮಟ್ಟ ಪರಿಶೀಲಿಸುವವರು ಇದನ್ನು ನೋಡಿಯೇ ಖರೀದಿಸುತ್ತಾರೆ. ಮಂಗಳವಾರ ತಹಸೀಲ್ದಾರ್​ ಅವರೇ ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಯಾವ ದೋಷಾ ರೋಪವೂ ಕಂಡು ಬಂದಿಲ್ಲ. - ಕೃಷ್ಣಪಪ್ರಭಾರ ಖರೀದಿ ಅಧಿಕಾರಿ ನಾನು ರಾಗಿ ಬಿಡಲು ನಫೆಡ್​ಗೆ ಬಂದಾಗಲೂ ನನಗೆ ದುಡ್ಡು ಕೇಳಿದರು. ನಾನು ಕೊಡೋದಿಲ್ಲ. ಸರ್ಕಾರ ನಿಮಗೆ ಸಂಬಳ ಕೊಡುತ್ತಿರುವಾಗ ನಮ್ಮಿಂದ ಏಕೆ ದುಡ್ಡು ಕೇಳುತ್ತೀರಿ ಎಂದು ದಬಾಯಿಸಿದಾಗ ಖರೀದಿ ಮಾಡಿದರು. ಇವತ್ತು ಕಳೆದ 2 ಗಂಟೆಗಳ ಕಾಲ ಇಲ್ಲೇ ಇದ್ದು ಎಲ್ಲವನ್ನೂ ಗಮನಿಸಿ ಮಾಧ್ಯಮಕ್ಕೆ ಮಾಹಿತಿ ನೀಡುತ್ತಿದ್ದು, ಇಲ್ಲಿ ದುಡ್ಡು ಕೊಟ್ಟರೆ ಮಾತ್ರ ರಾಗಿ ಖರೀದಿ ಎನ್ನುವ ವಾತಾವರಣ ನಿಮಾರ್ಣವಾಗಿದೆ. ಅನುಮಾನವಿದ್ದರೆ ಸಿಸಿ ಕ್ಯಾಮರಾ ಹಾಕಲಿ. ಈ ಹಿಂದೆ ತೂಗಿರುವ ರಾಗಿಯ ಗುಣಮಟ್ಟ ಪರೀಶಿಲಿಸಲಿ. - ಉದಯಕುಮಾರ್​ ರೈತ ಕೆಂಕೆರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net