

Transgender women : ಹುಟ್ಟುವಾಗ ಪುರುಷರಾಗಿ ಹುಟ್ಟಿ ಕೆಲವು ಹಾರ್ಮೋನ್ಗಳ ಕಾರಣದಿಂದ ಹೆಣ್ಣಾಗಿ ಗುರುತಿಸಿಕೊಳ್ಳುವವರು ಟ್ರಾನ್ಸ್‌ಜೆಂಡರ್ ಅಥವಾ ತೃತೀಯ ಲಿಂಗಿಗಳು ಎಂದು ಕರೆಯಲಾಗುತ್ತದೆ. ಸಮಾಜದಲ್ಲಿ ಅವರನ್ನು ಮಂಗಳಮುಖಿ ಸೇರಿದಂತೆ ಅನೇಕ ಹೆಸರುಗಳಿಂದ ಕರೆಯುತ್ತಾರೆ. ತೃತೀಯ ಲಿಂಗಿಗಳು ಈ ಸಮಾಜದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಅವರು ಗೌರವ ಪಡೆಯುವುದಕ್ಕಿಂತ ಅಪಹಾಸ್ಯಕ್ಕೆ ಒಳಗಾಗುವುದೇ ಹೆಚ್ಚು.
ಮನೆಯಿಂದಲ್ಲದೇ ಊರಿನಿಂದಲೂ ಅವರನ್ನು ಬಹಿಷ್ಕರಿಸುತ್ತಾರೆ. ಈ ಸಮಾಜ ತೃತೀಯ ಲಿಂಗಿಗಳನ್ನು ನೋಡುವ ರೀತಿಯೇ ಬೇರೆ. ಅವರಿಗೆ ಕೆಲಸ ಕೊಡಲು ಯಾರೂ ಮುಂದೆ ಬರುವುದಿಲ್ಲ. ಹೀಗಾಗಿ ಹೆಚ್ಚಿನ ತೃತೀಯ ಲಿಂಗಿಯರು ಸಾರ್ವಜನಿಕವಾಗಿ ಭಿಕ್ಷೆ ಬೇಡುವುದನ್ನು ನೀವು ಸಾಮಾನ್ಯವಾಗಿ ನೋಡಿರುತ್ತೀರಿ.
ಅಂದಹಾಗೆ, ಆ ರೀತಿ ಬದಲಾಗಿರುವುದು ಅವರ ತಪ್ಪಲ್ಲ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು. ತಮ್ಮ ಜನನಾಂಗಗಳಲ್ಲಿ ಪುರುಷನಾಗಿ ಗುರುತಿಸಿಕೊಂಡರೂ ತಮ್ಮ ಮನೋಧರ್ಮದಲ್ಲಿ ಸ್ತ್ರೀಯಾಗಿ ಬದುಕುತ್ತಾರೆ. ಮಗು ಭ್ರೂಣದಿಂದ ಬೆಳವಣಿಗೆ ಹೊಂದುವಾಗ ಸಂಭವಿಸುವ ಆನುವಂಶಿಕ ದೋಷವಾಗಿದೆ. ಇದರಿಂದಾಗಿ ಮಕ್ಕಳು ಗಂಡು ಅಥವಾ ಹೆಣ್ಣು ಎಂಬುದಿಲ್ಲದ ಮಧ್ಯಮ ಜಾತಿಯಾಗಿ ಹುಟ್ಟುತ್ತಾರೆ.
ತೃತೀಯ ಲಿಂಗಿಗಳನ್ನು ಕೆಲವರು ಕೀಳಾಗಿ ಕಂಡರೆ ಇನ್ನು ಕೆಲವರು ಅವರಲ್ಲಿ ದೇವರ ರೂಪವನ್ನು ಕಾಣುತ್ತಾರೆ. ಅವರು ಅರ್ಧನಾರೀಶ್ವನ ಪ್ರತಿಬಿಂಬ ಎನ್ನಲಾಗುತ್ತದೆ. ಹೀಗಾಗಿಯೇ ಅನೇಕ ಶುಭಕಾರ್ಯಗಳಿಗೆ ಅವರನ್ನು ಆಹ್ವಾನಿಸಲಾಗುತ್ತದೆ. ಅವರಿಂದ ಆಶೀರ್ವಾದ ಪಡೆದರೆ ತುಂಬಾ ಒಳ್ಳೆಯದು ಎಂಬ ಭಾವನೆ ಜನರಲ್ಲಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಟ್ರಾನ್ಸ್‌ಜೆಂಡರ್‌ಗಳಿಂದ ಕೆಲವು ವಸ್ತುಗಳನ್ನು ಖರೀದಿಸಿದರೆ ನಮಗೆ ಸಂಪತ್ತು ಬರುತ್ತದೆ ಎಂದು ನಂಬಲಾಗಿದೆ. ಆ ವಸ್ತುಗಳು ಯಾವುವು ಎಂಬುದನ್ನು ನಾವೀಗ ವಿವರವಾಗಿ ತಿಳಿದುಕೊಳ್ಳೋಣ.
ನಾವು ಟ್ರಾನ್ಸ್‌ಜೆಂಡರ್ ಮಹಿಳೆಯಿಂದ ನಾಣ್ಯವನ್ನು ಪಡೆದು, ಅದನ್ನು ಖರ್ಚು ಮಾಡದೆ ಇಟ್ಟುಕೊಂಡರೆ, ನಾವು ಹಣವನ್ನು ಸಂಗ್ರಹಿಸುತ್ತಲೇ ಇರುತ್ತೇವೆ. ಆದರೆ, ಯಾವುದೇ ಕಾರಣಕ್ಕೂ ಮಂಗಳಮುಖಿಯರಿಗೆ ಎಣ್ಣೆ ಹಾಗೂ ಪೊರಕೆಗಳನ್ನು ದಾನವಾಗಿ ಕೊಡಬಾರದು. ಒಂದು ವೇಳೆ ಕೊಟ್ಟರೆ, ಅಲ್ಲಿಂದ ನಿಮ್ಮ ಕೆಟ್ಟ ಸಮಯ ಶುರುವಾಗುತ್ತೆ.
ನಿಮ್ಮ ಜೀವನದಲ್ಲಿ ಶತ್ರುಗಳನ್ನು ಸಹ ಸ್ನೇಹಿತರನ್ನಾಗಿ ಮಾಡಲು ಬಯಸಿದರೆ, ಶತ್ರುವಿನ ಪೂರ್ಣ ಹೆಸರನ್ನು ಬಿಳಿ ಕಾಗದದ ಮೇಲೆ ಬರೆದು, ಅದನ್ನು ಸುತ್ತಿ, ಅದಕ್ಕೆ ಒಂದು ನಾಣ್ಯವನ್ನು ಸೇರಿಸಿ, ಅದನ್ನು ಟ್ರಾನ್ಸ್‌ಜೆಂಡರ್ ಮಹಿಳೆಯರಿಗೆ ನೀಡಿ, ವಾಪಸ್ ಪಡೆಯಿರಿ. ಈ ರೀತಿ ಮಾಡಿದರೆ, ನಿಮ್ಮ ಶತ್ರು ಕೂಡ ಕಡಿಮೆ ಸಮಯದಲ್ಲಿ ನಿಮ್ಮೊಂದಿಗೆ ಸ್ನೇಹಿತನಾಗುತ್ತಾನೆ.
ಇದಲ್ಲದೆ, ನೀವು ಟ್ರಾನ್ಸ್‌ಜೆಂಡರ್ ಮಹಿಳೆಗೆ ಹಣವಿರುವ ಮಗುವಿನ ಗೊಂಬೆಯನ್ನು ನೀಡಿ, ವಾಪಸ್ ಪಡೆದರೆ, ಶೀಘ್ರದಲ್ಲೇ ಮಗು ಆಗುತ್ತದೆ ಎಂಬ ನಂಬಿಕೆಯೂ ಇದೆ. ಇನ್ನು ನಿಂಬೆಹಣ್ಣುನ್ನು ಮಂತ್ರಿ ವಾಪಸ್ ಪಡೆದರೂ ಒಳ್ಳೆಯದಾಗುತ್ತದೆ ಎಂಬ ಬಲವಾದ ನಂಬಿಕೆಯೂ ಇದೆ. ಆದರೆ, ಯಾವುದೇ ಕಾರಣಕ್ಕೂ ಅವರನ್ನು ಕಂಡಾಗ ಗೇಲಿ ಮಾಡಬೇಡಿ. ಅದರ ಬದಲು, ಈ ರೀತಿ ಮಾಡಿ ಆಶೀರ್ವಾದ ಪಡೆಯಿರಿ. ಇದು ಜೀವನದಲ್ಲಿ ಪ್ರಗತಿಯನ್ನು ತರುತ್ತದೆ ಎಂದು ಜ್ಯೋತಿಷ್ಯ ನಂಬುತ್ತದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.