ಉದ್ಯಮಿ, ಬಜಾಜ್ ಸಮೂಹದ ಮಾಜಿ ಮುಖ್ಯಸ್ಥ ರಾಹುಲ್ ಬಜಾಜ್ ಇನ್ನಿಲ್ಲ

Rahul Bajaj
Published on

ನವದೆಹಲಿ: ಪದ್ಮಭೂಷಣ ಪುರಸ್ಕೃತ, ರಾಜ್ಯಸಭಾ ಸದಸ್ಯರೂ ಆಗಿದ್ದ ಉದ್ಯಮಿ ಹಾಗೂ ಬಜಾಜ್ ಸಮೂಹದ ಮಾಜಿ ಮುಖ್ಯಸ್ಥ ರಾಹುಲ್ ಬಜಾಜ್ (83) ಇಂದು ಕೊನೆಯಸಿರೆಳೆದರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮಧ್ಯಾಹ್ನ 2.30ರ ಸುಮಾರಿಗೆ ನಿಧನರಾದರು.

ಹೃದಯದ ಸಮಸ್ಯೆ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರನ್ನು ಒಂದು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಾಗ್ಯೂ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾಗಿ ಬಜಾಜ್ ಸಮೂಹದ ಮೂಲಗಳು ತಿಳಿಸಿವೆ.

1938ರ ಜೂ. 10ರಂದು ಜನಿಸಿದ್ದ ಅವರು 40 ವರ್ಷಗಳಿಗೂ ಅಧಿಕ ಕಾಲ ಬಜಾಜ್ ಗ್ರೂಪ್ ಕಂಪನಿಯ ಚೇರ್ಮನ್​ ಆಗಿದ್ದರು. ರಾಜ್ಯಸಭಾ ಸದಸ್ಯರೂ ಆಗಿದ್ದ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನೂ ನೀಡಿ ಸರ್ಕಾರ ಗೌರವಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net