

ಬೆಂಗಳೂರು: ಜನರು ತಮ್ಮ ನೆಚ್ಚಿನ ಸಾಕು ಪ್ರಾಣಿಗಳಿಗೆ ಪ್ರೀತಿ ತೋರಿಸಲು ಏನೇನೋ ಮಾಡುತ್ತಾರೆ. ಅವುಗಳಿಗೆ ಅಡುಗೆ-ತೊಡುಗೆ ನೀಡಿ ಖುಷಿ ಪಡುತ್ತಾರೆ.
ಆದರೆ, ಬೃಹತ್ ಪ್ರಾಣಿಯಾದ ಆನೆಯನ್ನು ಸಾಕುವುದೇ ಒಂದು ದೊಡ್ಡ ಸೋಜಿಗ. ಅಂತಹುದರಲ್ಲಿ ಅದಕ್ಕೆ ಪ್ಯಾಂಟ್ ಶರ್ಟ್ ಬೆಲ್ಟ್ ಹಾಕಿದರೇ ಹೇಗಿರುತ್ತದೆ. ಇಂತಹದೇ ಒಂದು ಫೋಟೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ. ಸದಾ ತಮ್ಮ ವಿಭಿನ್ನ ಫೋಸ್ಟ್ಗಳ ಮೂಲಕ ಟ್ವಿಟ್ಟರ್ನಲ್ಲಿ ಸಕ್ರಿಯವಾಗಿರುವ ದೇಶದ ಅಗ್ರಗಣ್ಯ ಉದ್ಯಮಿ ಆನಂದ್ ಮಹಿಂದ್ರಾ ಅವರು ಜನರ ಗಮನ ಸೆಳೆಯುವುದರಲ್ಲಿ ಸಿದ್ದ ಹಸ್ತರು.
ಬುಧವಾರ ಅವರು ಮಾಡಿರುವ ಟ್ವೀಟ್ ಒಂದು ಸಾಕಷ್ಟು ಸದ್ದು ಮಾಡಿದೆ. ಮಾರುಕಟ್ಟೆಯ ಬೀದಿಯಲ್ಲಿ ಮಾವುತನೊಂದಿಗೆ ಆನೆಯೊಂದು ಪ್ಯಾಂಟ್, ಬೆಲ್ಟ್ ಹಾಗೂ ಶರ್ಟ್ ಹಾಕಿಕೊಂಡು ಹೊರಟಿದೆ. ಇದಕ್ಕೆ ತೀವ್ರ ಆಶ್ಚರ್ಯ ವ್ಯಕ್ತಪಡಿಸಿರುವ ಆನಂದ ಮಹಿಂದ್ರಾ ಇನ್ಕ್ರೆಡಿಬಲ್ ಇಂಡಿಯಾ Ele-Pant ಎಂದು ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ಗೆ 254 ಕ್ಕಿಂತಲೂ ಹೆಚ್ಚು ಜನ ಪ್ರತಿಕ್ರಿಯಿಸಿದ್ದು, 1200 ಕ್ಕೂ ಹೆಚ್ಚು ಜನ ರಿ ಟ್ವೀಟ್ ಮಾಡಿದ್ದಾರೆ. 19 ಸಾವಿರ ಜನ ಲೈಕ್ ಮಾಡಿದ್ದಾರೆ. ಟ್ವಿಟ್ಟಿಗರು ತಹರೇವಾರಿ ಕಮೆಂಟ್ಗಳನ್ನು ಮಾಡಿದ್ದಾರೆ.