

ಮುಂಬೈ: ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ಕೈಗಾರಿಕೋದ್ಯಮಿ ವಿರೇನ್ ಮರ್ಚಂಟ್ ಅವರ ಪುತ್ರಿ ರಾಧಿಕಾ ಮರ್ಚಂಟ್ ಅವರ ವಿವಾಹ ಜುಲೈ 12, 2024 ರಂದು ಮುಂಬೈನಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಅಂದಹಾಗೆ ಈ ವಿವಾಹದಲ್ಲಿ ಭಾಗವಹಿಸುತ್ತಿರುವ ಅತಿಥಿಗಳ ಪಟ್ಟಿ ಈಗ ಎಲ್ಲರ ಗಮನವನ್ನು ಸೆಳೆದಿದೆ. ಹೌದು, ಮಾರ್ಚ್ ಆರಂಭದಲ್ಲಿ ಜಾಮ್ನಗರದಲ್ಲಿ ನಡೆಯಲಿರುವ ವಿವಾಹಪೂರ್ವ ಶಾಸ್ತ್ರಗಳಲ್ಲಿ ವಿದೇಶಿ ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.
ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್, ಬ್ಲ್ಯಾಕ್ ರಾಕ್ ಸಿಇಒ ಲಾರಿ ಫಿಂಕ್, ಬ್ಲ್ಯಾಕ್ಸ್ಟೋನ್ ಅಧ್ಯಕ್ಷ ಸ್ಟೀಫನ್ ಶವರ್ಜಮಾನ್, ಡಿಸ್ನಿ ಸಿಇಒ ಬಾಬ್ ಇಗೆರ್, ಇವಾಂಕಾ ಟ್ರಂಪ್, ಮಾರ್ಗನ್ ಸ್ಟಾನ್ಲಿ ಸಿಇಒ ಟೆಡ್ ಪಿಕ್, ಬ್ಯಾಂಕ್ ಆಫ್ ಅಮೆರಿಕ ಅಧ್ಯಕ್ಷ ಬ್ರಿಯಾನ್ ಥಾಮಸ್ ಮೊಯ್ನಿಹಾನ್, ಕತಾರ್ ಪ್ರಧಾನಿ ಮೊಹಮ್ಮದ್ ಬಿನ್ ಅಬ್ದುಲ್ರಹಮಾನ್ ಬಿನ್ ಜಾಸಿಮ್ ಅಲ್ ಥನಿ, ಅಡ್ನೋಕ್ ಸಿಇಒ ಸುಲ್ತಾನ್ ಅಹ್ಮದ್ ಅಲ್ ಜೇಬರ್, ಎಲ್ ರಾಥ್ಸ್ಚೈಲ್ಡ್ ಅಧ್ಯಕ್ಷ ಲಿನ್ ಫಾರೆಸ್ಟರ್ ಡಿ ರಾಥ್ಸ್ಚೈಲ್ಡ್, ಭೂತಾನ್ನ ರಾಜ ಮತ್ತು ರಾಣಿ, ಟೆಕ್ ಹೂಡಿಕೆದಾರ ಯೂರಿ ಮಿಲ್ನೆರ್ ಮತ್ತು ಅಡೋಬ್ ಸಿಇಒ ಶಂತನು ನಾರಾಯಣ್ ಸೇರಿದಂತೆ ಇತರರು ವಿಜೃಂಭಣೆಯಿಂದ ನಡೆಯಲಿರುವ ಈ ಮದುವೆ ಸಮಾರಂಭದಲ್ಲಿ ಭಾಗವಹಿಸುತ್ತಾರೆ.
ವರದಿಯ ಪ್ರಕಾರ, ಮಾರ್ಚ್ 1-3 ರಂದು ಜಾಮ್ನಗರದ ವಿಸ್ತಾರವಾದ ರಿಲಯನ್ಸ್ ಗ್ರೀನ್ಸ್ ಕಾಂಪ್ಲೆಕ್ಸ್ನಲ್ಲಿ ವಿವಾಹಪೂರ್ವ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ವರದಿಯಾಗಿದೆ. ಕಾಂಪ್ಲೆಕ್ಸ್ 10 ದಶಲಕ್ಷಕ್ಕೂ ಹೆಚ್ಚು ಮರಗಳು ಮತ್ತು ಏಷ್ಯಾದ ಅತಿದೊಡ್ಡ ಮಾವಿನ ತೋಟವನ್ನು ಹೊಂದಿದೆ. ಈ ಎಸ್ಟೇಟ್ ಅನ್ನು ಅನಂತ್ ಅಂಬಾನಿ ಪ್ರಾಣಿ ಪಕ್ಷಿಗಳ ಆಶ್ರಯ ತಾಣವಾಗಿ ಅಭಿವೃದ್ಧಿಪಡಿಸಿದ್ದು, ಈ ಸ್ಥಳವು ಅವರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ.
ಅನಂತ್ ಮತ್ತು ರಾಧಿಕಾ ಜನವರಿ 19 ರಂದು ನಿಶ್ಚಿತಾರ್ಥ ಮಾಡಿಕೊಂಡರು. ಐಐಟಿ ಬಾಂಬೆಯಲ್ಲಿ ನಡೆದ ಕಾಯ ಕ್ರಮವೊಂದರಲ್ಲಿ ಮಾತನಾಡುತ್ತಾ, ಆಕಾಶ್ ಅಂಬಾನಿ ಈ ವರ್ಷ ಅನಂತ್ ಅಂಬಾನಿ ವಿವಾಹವಾಗಲಿರುವ ಕಾರಣ ಕುಟುಂಬಕ್ಕೆ 2024 ವಿಶೇಷ ವರ್ಷ ಎಂದು ಬಹಿರಂಗಪಡಿಸಿದರು.
ಅನಂತ್ ಅಂಬಾನಿ ಬ್ರೌನ್ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಅಧ್ಯಯನವನ್ನು ಮುಗಿಸಿದರು. ಈಗ ರಿಲಯನ್ಸ್ ನ್ಯೂ ಎನರ್ಜಿ ಬಿಸಿನೆನ್ ಅನ್ನು ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ರಿಲಯನ್ಸ್ 02ಸಿ ಮತ್ತು ರಿಲಯನ್ಸ್ ನ್ಯೂ ಸೋಲಾರ್ ಎನರ್ಜಿಯ ನಿರ್ದೇಶಕರ ಹುದ್ದೆಯಲ್ಲಿದ್ದಾರೆ. ಅವರ ನಿವ್ವಳ ಮೌಲ್ಯವು 40 ಬಿಲಿಯನ್ ಡಾಲಗರ್ಳಿಗಿಂತ ಹೆಚ್ಚು ಎಂದು ಹೇಳಲಾಗುತ್ತದೆ.