More

    ಗೃಹಬಂಧನ ಭೀತಿಯಿಂದ ರಾತ್ರಿ ಕಾಂಗ್ರೆಸ್ ಕಚೇರಿಯಲ್ಲಿ ಮಲಗಿದ ಶರ್ಮಿಳಾ ರೆಡ್ಡಿ, ವಿಡಿಯೋ ವೈರಲ್

    ಆಂಧ್ರಪ್ರದೇಶ: ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ವೈಎಸ್ ಶರ್ಮಿಳಾ ರೆಡ್ಡಿ ಮತ್ತು ವೈಎಸ್​​​ಆರ್​​​​​ಸಿಪಿ ನಾಯಕ ಮತ್ತು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನಡುವಿನ ರಾಜಕೀಯ ಸಂಘರ್ಷ ಹೆಚ್ಚುತ್ತಿದೆ. ಗುರುವಾರ ವಿಜಯವಾಡದಲ್ಲಿ ಚಲೋ ಸೆಕ್ರೆಟರಿಯೇಟ್ ಪ್ರತಿಭಟನೆಗೆ ಶರ್ಮಿಳಾ ಕರೆ ನೀಡಿದ್ದಾರೆ. ಈ ಪ್ರತಿಭಟನೆಗೂ ಮುನ್ನ ವೈಎಸ್ ಶರ್ಮಿಳಾ ಗೃಹಬಂಧನ ತಪ್ಪಿಸಲು ಇಡೀ ರಾತ್ರಿ ಕಚೇರಿಯಲ್ಲೇ ಕಳೆದರು. ಇದೀಗ ಶರ್ಮಿಳಾ ನೆಲದ ಮೇಲೆ ಮಲಗಿರುವ ವಿಡಿಯೋವೊಂದು ಇದೀಗ ಹೊರಬಿದ್ದಿದೆ.

    ಇಂದು ಪ್ರತಿಭಟನೆಗೆ ಕರೆ ನೀಡಿದ ಶರ್ಮಿಳಾ 
    ನಿರುದ್ಯೋಗಿ ಯುವಕರು ಮತ್ತು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಮೊದಲು ಪರಿಹರಿಸುವಂತೆ ರಾಜ್ಯ ಸರ್ಕಾರವನ್ನು ಶರ್ಮಿಳಾ ಒತ್ತಾಯಿಸಿದ್ದಾರೆ. ಹೀಗಾಗಿ ಚಲೋ ಸೆಕ್ರೆಟರಿಯೇಟ್ ಪ್ರತಿಭಟನೆಗೆ ಕರೆ ನೀಡಿದ್ದಾರೆ. ವಿಜಯವಾಡದ ಆಂಧ್ರ ರತ್ನ ಭವನದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಶರ್ಮಿಳಾ, ಕಳೆದ ಐದು ವರ್ಷಗಳಲ್ಲಿ ಯುವಕರು, ನಿರುದ್ಯೋಗಿಗಳು ಮತ್ತು ವಿದ್ಯಾರ್ಥಿಗಳ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಜಗನ್ ಮೋಹನ್ ರೆಡ್ಡಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದರು.

    ಈ ಕುರಿತು X ನಲ್ಲಿ ಪೋಸ್ಟ್ ಮಾಡಿರುವ ಶರ್ಮಿಳಾ ಗೃಹಬಂಧನದಲ್ಲಿ ಇರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ್ದಾರೆ. “ನಿರುದ್ಯೋಗಿಗಳ ಪರವಾಗಿ ನಾವು ಪ್ರತಿಭಟನೆಗೆ ಕರೆ ನೀಡಿದರೆ, ನೀವು ನಮ್ಮನ್ನು ಗೃಹಬಂಧನದಲ್ಲಿಡಲು ಪ್ರಯತ್ನಿಸುತ್ತೀರಾ” ಎಂದು ಅವರು ಬರೆದುಕೊಂಡಿದ್ದಾರೆ. “ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವ ಹಕ್ಕು ನಮಗಿಲ್ಲವೇ? ಒಬ್ಬ ಮಹಿಳೆಯಾಗಿ ನಾನು ಬಂಧನವನ್ನು ತಪ್ಪಿಸಲು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ರಾತ್ರಿ ಕಳೆಯಬೇಕಾಯಿತು ಎಂಬುದು ನಾಚಿಕೆಗೇಡಿನ ಸಂಗತಿಯಲ್ಲವೇ” ಎಂದು ಶರ್ಮಿಳಾ ಪ್ರಶ್ನಿಸಿದ್ದಾರೆ.

    ಗುರುವಾರ ಸಾವಿರಾರು ಪೊಲೀಸರು ತಮ್ಮ ಮನೆಯನ್ನು ಸುತ್ತುವರಿದಿದ್ದಾರೆ ಎಂದು ಶರ್ಮಿಳಾ ಹೇಳಿದ್ದಾರೆ. ಮನೆ ಸುತ್ತಲೂ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿದೆ. ಕಬ್ಬಿಣದ ಬೇಲಿ ಹಾಕಿ ನಮ್ಮನ್ನು ಒತ್ತೆಯಾಳಾಗಿ ಇಡಲಾಗಿದೆ. ನಿರುದ್ಯೋಗಿಗಳ ಪರ ನಿಂತರೆ ನಮ್ಮನ್ನು ಬಂಧಿಸುತ್ತಿದ್ದಾರೆ. ನೀವು ನಮ್ಮನ್ನು ತಡೆಯಲು ಪ್ರಯತ್ನಿಸುತ್ತಿರುವ ಸರ್ವಾಧಿಕಾರಿ. ನಿಮ್ಮ ಕ್ರಮಗಳು ತಪ್ಪಾಗಿವೆ. ಇದಕ್ಕೆ ಪುರಾವೆ ಇದೆ. ವೈಎಸ್​​​ಆರ್​​​​​ಸಿಪಿ ಸರಕಾರ ನಿರುದ್ಯೋಗಿಗಳ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

    ಶರ್ಮಿಳಾ ಜನವರಿ 4 ರಂದು ಕಾಂಗ್ರೆಸ್ ಸೇರಿದ್ದರು. ನಂತರ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಯಿತು.

    ದೆಹಲಿ ಮದ್ಯ ಹಗರಣ: ದಿಲ್ಲಿ ಸಿಎಂ ಕೇಜ್ರಿವಾಲ್‌ಗೆ 7 ನೇ ಬಾರಿಗೆ ಇಡಿ ಸಮನ್ಸ್‌

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts