

ಕೋಲಾರ: ಒಕ್ಕೂಟ ರಿಯಲ್ ಎಸ್ಟೇಟ್ ವ್ಯಾಪಾರವಲ್ಲ. ಒಕ್ಕೂಟ ರೈತರ ಸಂಸ್ಥೆ ಎಂದು ಶಾಸಕ ಹಾಗೂ ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ಹೇಳಿದರು.
ಒಕ್ಕೂಟದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎನ್.ಎನ್.ನಾರಾಯಣಸ್ವಾಮಿ ಏನು ಮಾಡ್ತಿದ್ದಾರೆ ಎಂಬುದನ್ನು ಗಮನಿಸುತ್ತೇನೆ. ಅವರು ನಮ್ಮ ಪಕ್ಷದವರು ಆಗಿರುವುದರಿಂದ ಸುಮ್ಮನಿದ್ದೇನೆ. ವಿರೋಧ ಪಕ್ಷದವರು ಆಗಿದ್ದರೆ ಕಥೆ ಬೇರೆಯೇ ಇರುತ್ತಿತ್ತು ಎಂದರು.
ನಾರಾಯಣಸ್ವಾಮಿ ಅವರಿಗೆ ನಂಜೇಗೌಡರೆ ಕಾಣುತ್ತಿದ್ದಾರೆನೊ..?, ಬಂಗಾರಪೇಟೆಯಲ್ಲಿ ಒಕ್ಕಲಿಗರು ಏನು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಕಾಣ್ತಿದೆ. ರಾಜ್ಯದಲ್ಲೂ ಸಹ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಸಹ ಒಕ್ಕಲಿಗರಿಗೆ ಸಹಾಯ ಮಾಡುತ್ತಿದ್ದಾರೆ ಅಂತ ದೂರು ಹೇಳ್ತಿದ್ದಾರೆ. ಇದರಿಂದ ಸಿಗುವ ಪ್ರಮಾಣ ಪತ್ರ ಯಾವುದು ಎಂದು ಪ್ರಶ್ನಿಸಿದರು.
ಒಕ್ಕೂಟದಲ್ಲಿ ನೂರಾರು ಕೋಟಿ ಹಗರಣ ಅಂತ ಹೇಳಿಕೆಗಳು ನೀಡುತ್ತಿದ್ದಾರೆ. ಅಲ್ಲಿನ ನಮ್ಮ ಕಾರ್ಯಕ್ರಮ ಇರೊದೆ 300 ಕೋಟಿ ರೂ., ನಿರ್ದೇಶಕರಾಗಿ ಆಯ್ಕೆಯಾಗಿ ಬಂದಿದ್ದು, ಕೇಳಿದ ಮಾಹಿತಿ ಸಿಗುತ್ತದೆ ತೆಗೆದುಕೊಳಲ್ಲಿ. ಏನೆಲ್ಲ ಅಭಿವೃದ್ಧಿ ಕೆಲಸಗಳು ಆಗುತ್ತಿವೆ ಎಂದು ನೋಡ್ತಿದರಲ್ಲ. ಐಸ್ಕ್ರಿಂ, ಎಂವಿಕೆ ಡೇರಿ, ವಿದ್ಯಾರ್ಥಿನಿಲಯ, ಸೋಲಾರ್ ಟಕ ನಿರ್ಮಾಣ ಮಾಡಲಾಗಿದೆ. ಇದೆಲ್ಲ ರಾಜ್ಯದಲ್ಲೇ ಪ್ರಥಮ ಎಂದು ತಿಳಿಸಿದರು.