

ಕೋಲಾರ: ಕೋಚಿಮುಲ್ನಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದವರ ವಿರುದ್ಧ ಹೋರಾಟ ನಡೆಸಿ ಜೈಲಿಗೆ ಕಳುಹಿಸುವ ತನಕ ಸುಮ್ಮನಿರುವುದಿಲ್ಲ. ಈ ವಿಚಾರದಲ್ಲಿ ರಾಜೀಯಾಗುವ ಪ್ರಶ್ನೆಯಿಲ್ಲ ಎಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಒಕ್ಕೂಟದ ಚುನಾವಣೆಯು ಬಹಳ ದುಬಾರಿಯಾಗಿ ನಡೆದಿದೆ. ಕೋಲಾರದಲ್ಲಿ ಇಬ್ಬರು ಸೇರಿ ಕೆಲವರು ವೆಚ್ಚ ಮಾಡಿರೊದು ಒಕ್ಕೂಟದಿಂದ ಲೂಟಿ ಮಾಡಿರುವ ಹಣದಿಂದ ಎಂದು ಆರೋಪಿಸಿದರು.
ಒಕ್ಕೂಟದಲ್ಲಿ 1987ರಿಂದ ಇದುವರೆಗೂ ಅಧ್ಯಕ್ಷನಾಗಲು ದಲಿತರಿಗೆ ಅವಕಾಶ ನೀಡಿಲ್ಲ. ಮಲ್ಲಿಕಾರ್ಜುನ ರ್ಖಗೆ, ಪ್ರಿಯಾಂಕ್ ರ್ಖಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಬೈರತಿ ಸುರೇಶ್, ಕೆ.ಎಚ್.ಮುನಿಯಪ್ಪ ಅವರನ್ನು ಅವಕಾಶ ಕಲ್ಪಿಸಲು ಒತ್ತಾಯ ಮಾಡಿದ್ದೆ. ಕೆಎಂಎ್ಗೆ ಹೋಗಬೇಕು ಎಂದು ಕೆ.ವೈ.ನಂಜೇಗೌಡ ಬಳಿ ಪ್ರಸ್ತಾಪಿಸಿಲ್ಲ. ಈ ವಿಚಾರವನ್ನು ವರಿಷ್ಠರ ಬಳಿ ಪ್ರಸ್ತಾಪ ಮಾಡಿದ್ದು, ಅವಕಾಶ ಕಲ್ಪಿಸುವ ಭರವಸೆ ನೀಡಿದ್ದಾರೆ. ವರಿಷ್ಠರ ಮಾತಿಗೆ ಕಟ್ಟು ಬಿದ್ದು ಸುಮ್ಮನಿದ್ದೇನೆ. ನಂಜೇಗೌಡರಿಗೆ ಸಿಕ್ಕಿರುವ ಅವಕಾಶ ಸಾಲದು, ಕೆಎಂಎ್ ಜತೆಗೆ ಸಚಿವ ಸ್ಥಾನನ್ನು ಕೇಳ್ತಾರೆ ಎಂದು ವ್ಯಂಗ್ಯವಾಡಿದರು.
ಸರ್ಕಾರಕ್ಕೆ ಮುಜುಗರ ಆಗುತ್ತದೆ ಎಂದು ಉಸ್ತುವಾರಿ ಸಚಿವ ಬೈರತಿ ಸರೇಶ್ ತಿಳಿಸಿದ್ದರಿಂದ ಗೌರವ ಕೊಟ್ಟು ಸ್ಪರ್ಧೆ ಮಾಡದೆ ಇದ್ದೆ, ಪಕ್ಷಕ್ಕೆ ಮುಜುಗರ ಆಗದಂತೆ ಸ್ಪರ್ಧಿಸಲಿಲ್ಲ. ಆರೋಗ್ಯದ ಸಮಸ್ಯೆಯಿಂದ ಗೈರು ಆಗಿದ್ದೆ ಎಂದು ಸ್ಪಷ್ಟಪಡಿಸಿದರು.
ಒಕ್ಕೂಟದ ಎಂಡಿ ಗೋಪಾಲ್ಮೂರ್ತಿ, ನಾಗೇಶ್, ಚೇತನ್ ಅಧ್ಯಕ್ಷರು ಪರವಾಗಿದ್ದಾರೆ ಎಂದರೆ ಏನುಬೇಕಾದರು ಮಾಡಬಹುದು. ರೈತರ, ಹೆಣ್ಣು ಮಕ್ಕಳ ಹಿತ ಕಾಪಾಡಲು ಒಕ್ಕೂಟಕ್ಕೆ ಪ್ರವೇಶ ಮಾಡಿದ್ದೇನೆ. ಅವರು ಕೊಡುವ ಸಭೆಯ ಶುಲ್ಕ, ಸಭೆಯಲ್ಲಿ ಕೊಡುವ ಟೀ ಕಾಫಿ ಸಹ ಸೇವನೆ ಮಾಡುವುದಿಲ್ಲ. ಬದಲಾಗಿ ಅಕ್ರಮಗಳ ಬಗ್ಗೆ ಹೋರಾಟ ನಡೆಸುತ್ತೇನೆ. ಅಕ್ರಮಗಳ ಬಗ್ಗೆ ಸಿಎಂ ಬಳಿ ಕಡತ ನೀಡಲಾಗಿದ್ದು ತನಿಖೆ ನಡೆಸುತ್ತಾರೆ ಎಂಬ ನಿರೀೆಯಿದೆ. ಸದನದಲ್ಲಿ ಧ್ವನಿ ಎತ್ತಿದಾಗ ಸಚಿವರು ತನಿಖೆ ಮಾಡಿಸಿಲ್ಲ. ಮೇಲ್ನೋಟಕ್ಕೆ ಹೇಳೊಬದಲು ತನಿಖೆ ಮಾಡಿಸಲಿ. ಆ ಸಂದರ್ಭದಲ್ಲಿ ದೂರುದಾರ ನನ್ನನ್ನು ಕರೆಯಲಿ. ತನ್ನ ಕಾಲನ್ನು ತಾನೇ ನಮಸ್ಕಾರ ಮಾಡಿಕೊಂಡರೆ ನೂರು ವರ್ಷ ಬದುಕುತ್ತೇನೆ ಎಂದರೆ ಏನರ್ಥ ಎಂದು ಪ್ರಶ್ನಿಸಿದರು.
* ಎಲ್ಲದರಲ್ಲೂ ಚಿಕ್ಕವನೇ
ನಾನು ಹುಟ್ಟುತಾ ರೈತ. ಹೋರಾಟ ಮಾಡಿಕೊಂಡು ಮೇಲೆ ಬಂದವನು. ಹಿಂದೆ ಮಂಜುನಾಥ್ ಅವರು ಅವ್ಯವಹಾರ ಮಾಡಿದವರಿಗೆ ಶಾಪ ತಟ್ಟಲಿ ಅಂತ ಹೇಳಿದ್ದರು, ಇದೀಗ ಬೆಂಬಲ ನೀಡ್ತಿದ್ದಾರೆ. ನಂಜೇಗೌಡರ ಮುಂದೆ ಎಲ್ಲಾ ರೀತಿ ಚಿಕ್ಕವನೇ, ಕ್ವಾರಿಯಲ್ಲಿ, ಭೂಮಿಯಲ್ಲಿ ಜಾತಿ, ಬುದ್ದಿಯಲ್ಲಿ ಚಿಕ್ಕವನೆ ಎಂದು ತಿಳಿಸಿದರು.