

ರಾಣೆಬೆನ್ನೂರ: ಸಮರ್ಪಕವಾಗಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ತಾಲೂಕಿನ ಗುಡ್ಡದ ಆನ್ವೇರಿ ಗ್ರಾಮದ ಶಾಲಾ ಕಾಲೇಜು ವಿದ್ಯಾಥಿರ್ಗಳು, ಗ್ರಾಮಸ್ಥರು ಮಂಗಳವಾರ ರಾಣೆಬೆನ್ನೂರ&ಗುತ್ತಲ ಮಾರ್ಗದಲ್ಲಿ ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಬೆಳಗ್ಗೆ ಶಾಲಾ ಕಾಲೇಜುಗಳಿಗೆ ತೆರಳು ಸಾಧ್ಯವಾಗುತ್ತಿಲ್ಲ. ಗುತ್ತಲ ಹಾಗೂ ಇನ್ನಿತರ ಮಾರ್ಗದಲ್ಲಿ ಬರುವ ಬಸ್ಗಳು ಪ್ರಯಾಣಿಕರಿಂದ ಹಾಗೂ ವಿದ್ಯಾಥಿರ್ಗಳಿಂದ ತುಂಬಿ ತುಳುಕುತ್ತಿರುತ್ತವೆ. ಹೀಗಿರುವಾಗ ನಮಗೆ ಬಸ್ ಹತ್ತಲೂ ಸಹ ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾಥಿರ್ಗಳು ಆರೋಪಿಸಿದರು.
ತಡೆರಹಿತ ಬಸ್ಗಳು ನಿಲುಗಡೆಯಾಗುವುದಿಲ್ಲ. ಅಲ್ಲದೆ ನಿಲುಗಡೆ ಇರುವ ಬಸ್ಗಳೂ ಸಹ ನಿಲ್ಲಿಸದೆ ವೇಗವಾಗಿ ಹೋಗುತ್ತವೆ. ವಿದ್ಯಾಥಿರ್ಗಳು ನಿಲುಗಡೆಗಾಗಿ ಕೈ ಮಾಡಿದಾಗ ವಿದ್ಯಾಥಿರ್ಗಳ ಮೈಮೇಲೆ ಬರುತ್ತಾರೆ. ನಮಗೇನಾದರೂ ಆದರೆ ನಮ್ಮ ಭವಿಷ್ಯಕ್ಕೆ ಹಾಗೂ ನಮ್ಮನ್ನೇ ನಂಬಿರುವ ಪಾಲಕರಿಗೆ ಯಾರು ಗತಿ ಎಂದು ವಿದ್ಯಾಥಿರ್ಗಳು ಆಕ್ರೋಶ ವ್ಯಕ್ತಪಡಿಸಿದರು.
ಟನಾ ಸ್ಥಳಕ್ಕೆ ಪೊಲೀಸರು ಹಾಗೂ ಸಾರಿಗೆ ಸಂಸ್ಥೆ ಕಂಟ್ರೋಲರ್ ಉಮೇಶ ನಾಯಕ ಆಗಮಿಸಿ, ಇನ್ಮುಂದೆ ಇಂತಹ ಪರಿಸ್ಥಿತಿ ನಿಮಾರ್ಣವಾಗದಂತೆ ನೋಡಿಕೊಳ್ಳುತ್ತೇವೆ. ರಾಣೆಬೆನ್ನೂರ ಸಾರಿಗೆ ಟಕಕ್ಕೆ ಸಂಬಂಧಿಸಿದ ಎಲ್ಲ ತಡೆರಹಿತ ಬಸ್ಗಳನ್ನು ಹಾಗೂ ಇದೀಗ ನಿಲುಗಡೆ ಇರುವ ಎಲ್ಲ ಬಸ್ಗಳನ್ನು ನಿಲ್ಲಿಸುವಂತೆ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
ಗ್ರಾಮದ ವಿದ್ಯಾಥಿರ್ಗಳು, ಪಾಲಕರು ಪ್ರತಿಭಟನೆಯಲ್ಲಿದ್ದರು.