ಬಸ್ ನಿಲುಗಡೆಗಾಗಿ ಸಹಿ ಸಂಗ್ರಹಿಸಿದ ಕುಮಾರಪಟ್ಟಣ ಗ್ರಾಮಸ್ಥರು

4-RNR-03
Published on

ರಾಣೆಬೆನ್ನೂರ: ತಾಲೂಕಿನ ಕುಮಾರಪಟ್ಟಣ ಹಾಗೂ ಕೋಡಿಯಾಲ ಹೊಸಪೇಟೆ ಭಾಗದ ಪ್ರಯಾಣಿಕರಿಗೆ ಓಡಾಡಲು ಬಸ್ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಎರಡು ಗ್ರಾಮಸ್ಥರು ಶನಿವಾರ ಕುಮಾರಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಿದರು.
ರಾಣೆಬೆನ್ನೂರ-ಹರಿಹರಕ್ಕೆ ತೆರಳುವ ಬಸ್‌ಗಳು ಈ ಭಾಗದಲ್ಲಿ ನಿಲ್ಲಿಸುತ್ತಿಲ್ಲ. ಸ್ಥಳೀಯ ಸಾರಿಗೆ ಬಸ್‌ಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಅಲ್ಲದೆ ಈ ಭಾಗದಲ್ಲಿ ಬಸ್ ನಿಲ್ದಾಣದ ಸಹ ಇಲ್ಲದ ಕಾರಣ ಬಸ್‌ಗಳು ನಿಲ್ಲಿಸುತ್ತಿಲ್ಲ. ಇದರಿಂದ ನಿತ್ಯವೂ ಶಾಲಾ-ಕಾಲೇಜ್ ವಿದ್ಯಾರ್ಥಿಗಳು, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಹಾಗೂ ಗ್ರಾಮೀಣ ಭಾಗದ ಜನರಿಗೆ ತೀವ್ರ ತೊಂದರೆ ಉಂಟಾಗಿದೆ.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಬಸ್ ನಿಲ್ದಾಣ ನಿರ್ಮಿಸಬೇಕು. ಅಲ್ಲದೆ ಸಾರಿಗೆ ಸಂಸ್ಥೆಯ ಎಲ್ಲ ಬಸ್‌ಗಳ ನಿಲುಗಡೆಗೆ ಸೂಚಿಸಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಚರಣ ಅಂಗಡಿ, ವಿಜಯಕುಮಾರ ಎಂ.ಯು., ಕಿರಣ ಕೆ., ಕೃಷ್ಣ ಕಮ್ಮಾರ, ಮಾನಸ ಜೆ.ಕೆ., ವಿನಾಯಕ ಎಂ.ಬಿ., ಮಹೇಶ ಗೋಣೆಪ್ಪನವರ, ಗ್ರಾಪಂ ದಿನೇಶ ಹಳ್ಳೆಳ್ಳಪ್ಪನವರ, ಬಸವಣ್ಣೆಪ್ಪ ಹೆಗ್ಗಪ್ಪನವರ, ವಿಶ್ವನಾಥ ಚಳಗೇರಿ, ನಾಗರಾಜ ಬಿ.ಎಚ್., ಅರುಣ ಸಾಲಕಟ್ಟಿ, ಮಧು ಚಳಗೇರಿ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net