

ನವದೆಹಲಿ: ಎಷ್ಟೋ ಜನರಿಗೆ ಪ್ರಾಣಿಗಳನ್ನು ಸಾಕುವುದೆಂದರೆ ಇಷ್ಟ. ಹೆಚ್ಚಾಗಿ ಸಾಕಲ್ಪಡುವ ಪ್ರಾಣಿಗಳೆಂದರೆ ಬೆಕ್ಕುಗಳು ಹಾಗೂ ನಾಯಿಗಳು. ಅಮೆರಿಕದ ಫುಟ್ಬಾಲ್ ಆಟಗಾರರೊಬ್ಬರು ತಾವು ಸಾಕಿದ ನಾಯಿಮರಿಗಾಗಿ ಮನೆಯೊಳಗೇ ಏಣಿಯ ಮೆಟ್ಟಿಲುಗಳ ಪಕ್ಕ ಲಿಫ್ಟ್ ಮಾದರಿಯ ಡಬ್ಬಲ್ ಡೆಕ್ಕರ್ ಬಸ್ನ ವ್ಯವಸ್ಥೆ ಮಾಡಿದ್ದಾರೆ.
ಒಳಗೆ ಕುಳಿತ ಕೂಡಲೇ ಬಸ್ ನಾಯಿಮರಿಯನ್ನು ಮೇಲಿನಿಂದ ಕೆಳಕ್ಕೆ, ಕೆಳಗಿನಿಂದ ಮೇಲಕ್ಕೆ ಕೊಂಡೊಯ್ಯುತ್ತದೆ. ನಾಯಿಮರಿಯು ಸಂಧಿವಾತ ಸಮಸ್ಯೆಯಿಂದ ಬಳಲುತ್ತಿದ್ದು, ಅದರ ಸ್ನಾಯು, ಮೃದ್ವಸ್ಥಿಗಳು ದುರ್ಬಲವಾಗಿವೆ. ಹೀಗಾಗಿ ಅದು ನಡೆದಾಡಿದರೆ ಬಿದ್ದುಹೋಗುತ್ತಿದೆ.ಹೀಗಾಗಿ ಈ ವ್ಯವಸ್ಥೆ ಮಾಡಲಾಗಿದೆ. ಈ ವ್ಯವಸ್ಥೆಗೆ ಅಂತರ್ಜಾಲದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.