ಪಾನಿಪುರಿಗಾಗಿ ಬಸ್​​ ನಿಲ್ಲಿಸಿ ಕೆಲಸ ಕಳೆದುಕೊಂಡ ಬಸ್ ಚಾಲಕ!

Bus driver takes panipuri break in Gujarats Adalaj suspended
Published on

ಗುಜರಾತ್‌: ಕರ್ತವ್ಯದಲ್ಲಿರುವಾಗಲೇ ಬಸ್ ಚಾಲಕನೊಬ್ಬ ಪಾನಿಪುರಿ ತಿನ್ನುವುದಕ್ಕಾಗಿಯೇ ಬಸ್‌ನ್ನು ರಸ್ತೆ ಪಕ್ಕಾ ನಿಲ್ಲಿಸಿ ಈಗ ಕೆಲಸಕ್ಕೆ ಕುತ್ತು ತಂದುಕೊಂಡಿದ್ದಾನೆ. ಗುಜರಾತ್‌ನ ಅದಲಾಜ್ ಎಂಬಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ಸೋಶಿಯಲ್​ ಮೀಡಿಯಾ ತುಂಬಾ ವೈರಲ್​ ಆಗುತ್ತಿದೆ.

ಬಿಆರ್‌ಟಿಎಸ್ ಬಸ್ ಚಾಲಕ ಬಸ್‌ ಪೂರ್ತಿ ತುಂಬಿದ್ದ ಜನರನ್ನು ಕೂಡ ಗಣನೆಗೆ ತೆಗೆದುಕೊಳ್ಳದೇ ರೆಸಿಡೆನ್ಶಿಯಲ್ ಸೊಸೈಟಿಯೊಂದರ ಮುಂದೆ ಬಸ್ ನಿಲ್ಲಿಸಿದ ಆತ ಸೀದಾ ಹೋಗಿ ಪಾನಿಪುರಿ ವಾಲಾನ ಮುಂದೆ ನಿಂತಿದ್ದಾನೆ. ಹೀಗಾಗಿ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ 10 ನಿಮಿಷ ವಿಳಂಬವಾಗಿದೆ.

ಕರ್ತವ್ಯದ ನಡುವೆ ಬಸ್ ನಿಲ್ಲಿಸಿ ಪಾನಿಪುರಿ ತಿನ್ನಲು ಹೋದ ಆತನ ವರ್ತನೆ ಬಗ್ಗೆ ಸಿಟ್ಟಿಗೆದ್ದ ಪ್ರಯಾಣಿಕರು ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಕಳೆದ ಶನಿವಾರ ಈ ಘಟನೆ ನಡೆದಿದ್ದು, ಈತ ಪಾನಿಪುರಿ ತಿನ್ನುತ್ತಿರುವುದನ್ನು ಯಾರೂ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋದಿಂದಾಗಿ ಅಧಿಕಾರಿಗಳಿಗೆ ಈ ವಿಚಾರ ತಿಳಿದಿದ್ದು, ಬಸ್ ಚಾಲಕನಿಗೆ 1000 ಸಾವಿರ ರೂಪಾಯಿ ದಂಡ ವಿಧಿಸಿ ಅಮಾನತು ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net