More

    ನೀವು ಎಳನೀರು ಪ್ರಿಯರೇ..? ಹಾಗಿದ್ರೆ ಈ ಸುದ್ದಿ ಓದಿ…

    ಳನೀರು ಇತರ ಪಾನೀಯಗಳಿಗೆ ಹೋಲಿಸಿದರೆ ತುಂಬಾ ರುಚಿ ಮತ್ತು ಪೌಷ್ಟಿಕಾಂಶವನ್ನು ಹೊಂದಿದೆ. ಈ ಪಾನೀಯ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ದಿನಕ್ಕೊಮ್ಮೆಯಾದರು ಈ ಎಳನೀರು ಸೇವಿಸಿದರೆ ನೀವು ಆರೋಗ್ಯವನ್ನು ಉತ್ತಮವಾಗಿಸಿರಿಕೊಳ್ಳಬಹುದಾಗಿದೆ. ಕೂಲ್‌ಡ್ರಿಂಕ್ಸ್‌, ಬಾಟಲ್‌ ಜ್ಯೂಸ್‌ ಇತ್ಯಾದಿಗಳ ಬದಲು ಎಳನೀರು ಸೇವನೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.

    ತೀವ್ರ ಹವಾಮಾನ ಪರಿಸ್ಥಿತಿಗಳ ಬಗ್ಗೆ ಜನರಿಗೆ ತಿಳಿಸಲು ಮತ್ತು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಅವರಿಗೆ ಸಲಹೆ ನೀಡಲು, ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆಗಳನ್ನು ನೀಡುತ್ತದೆ. ಈಗ ವಾತಾವರಣ ಕೊಂಚ ಬದಲಾಗಿದೆ. ಸಂಜೆ ವೇಳೆ ಮೋಡ ಕವಿದ ವಾತಾವರಣ ಇದ್ದು, ಮಳೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅದೇ ಬೆಳಿಗ್ಗೆ ಸುಡುವ ಬಿಸಿಲು ಇದ್ದು, ನೆತ್ತಿ ಸುಡುವ ಬಿಸಿಲು. ಏನೇ ಕುಡಿದರೂ ಮತ್ತೆ ಮತ್ತೆ ಬಾಯಾರಿಕೆ- ದಾಹ. ಹೀಗಾಗಿ ಕಲ್ಲಂಗಡಿ, ಕಬ್ಬಿನ ರಸ, ಲಸ್ಸಿ, ತಂಪು ಪಾನೀಯಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ. ಯಾವುದೇ ಹಣ್ಣು ಮಾರುಕಟ್ಟೆಗೆ ಬಂದರು ಎಳನೀರು ಮಾತ್ರಾ ತನ್ನದೇ ಆಗಿರುವ ಗ್ರಾಹಕರನ್ನು ಹೊಂದಿದೆ.

    ತೆಂಗಿನ ನೀರು ನೈಸರ್ಗಿಕ ಮೂಲವಾಗಿದೆ. ತೆಂಗಿನ ನೀರು ನೈಸರ್ಗಿಕ ತಂಪಾಗಿಸುವ ಗುಣಗಳನ್ನು ಹೊಂದಿದ್ದು, ಅದು ದೇಹದ ಉಷ್ಣತೆಯನ್ನು ನಿಯಂತ್ರಿಸಲು ಮತ್ತು ಶಾಖದ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    ಪೋಷಕಾಂಶಗಳು:
    ತೆಂಗಿನ ನೀರಿನಲ್ಲಿ ಕ್ಯಾಲ್ಸಿಯಂ, ಕಬ್ಬಿಣ ಮತ್ತು ವಿಟಮಿನ್ ಸಿ ಯಂತಹ ಪೋಷಕಾಂಶಗಳು ಸಮೃದ್ಧವಾಗಿವೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶಾಖದ ಸಮಯದಲ್ಲಿ ಇದು ವಿಶೇಷವಾಗಿ ಮುಖ್ಯವಾಗಿರುತ್ತದೆ. ಏಕೆಂದರೆ ಶಾಖದ ಒತ್ತಡದಿಂದಾಗಿ ದೇಹವು ಅನಾರೋಗ್ಯ ಮತ್ತು ಸೋಂಕಿಗೆ ಹೆಚ್ಚು ಒಳಗಾಗಬಹುದು. ತೆಂಗಿನ ನೀರು ಪೊಟ್ಯಾಸಿಯಮ್, ಸೋಡಿಯಂ ಮತ್ತು ಮೆಗ್ನೀಸಿಯಮ್‌ನಂತಹ ಎಲೆಕ್ಟ್ರೋಲೈಟ್‌ಗಳ ಅತ್ಯುತ್ತಮ ಮೂಲವಾಗಿದೆ. ಈ ಖನಿಜಗಳು ದೇಹದಲ್ಲಿ ದ್ರವ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

    ಕಡಿಮೆ ಕ್ಯಾಲೋರಿಗಳು:
    ತೆಂಗಿನ ನೀರು ಕಡಿಮೆ ಕ್ಯಾಲೋರಿ ಪಾನೀಯವಾಗಿದೆ. ಸಕ್ಕರೆ ಅಥವಾ ಹೆಚ್ಚಿನ ಕ್ಯಾಲೋರಿ ಪಾನೀಯಗಳಿಗೆ ಅತ್ಯುತ್ತಮ ಪರ್ಯಾಯವಾಗಿದೆ. ಕಿಡ್ನಿ ಕಲ್ಲುಗಳು ಬಾರದಂತೆ ತಡೆಯಲು ಎಳನೀರು ಸೇವನೆ ಅಗತ್ಯ. ಸಾದಾ ನೀರು ಒಳ್ಳೆಯ ಆಯ್ಕೆ, ಆದರೆ ಎಳನೀರು ಅತ್ಯುತ್ತಮ ಆಯ್ಕೆ ಎನ್ನುತ್ತವೆ ಎರಡು ಚಿಕ್ಕ ಅಧ್ಯಯನಗಳು.

    ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:
    ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಹಾಗಾಗಿ ಆ ಸಮಯದಲ್ಲಿ ಎಳನೀರನ್ನು ಕುಡಿಯುವುದು ಉತ್ತಮ. ಉತ್ತಮ ಆರೋಗ್ಯಕ್ಕೆ ಅವಶ್ಯಕವಾಗಿರುವ ಕೆಲವು ಪೋಷಕಾಂಶಗಳನ್ನು ಈ ಎಳನೀರು ನೀಡುತ್ತದೆ.

    ಹೆಣ್ಣು ಮಗುವಿಗೆ ಜನ್ಮ ನೀಡಿದ ಸೀರಿಯಲ್ ನಟಿ ದಿವ್ಯಾ ಶ್ರೀಧರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts