ತಮ್ಮ ವೃತ್ತಿಗೆ ಸಾಕ್ಷಿಯಾಗಿದ್ದ ಬಸ್​ಗೆ ಪೂಜೆ ಸಲ್ಲಿಸಿ ನಿವೃತ್ತಿ ಹೊಂದಿದ ಚಾಲಕ!

bus driver
Published on

ಬೆಳಗಾವಿ: ಕರ್ನಾಟಕ ವಾಯವ್ಯ ಸಾರಿಗೆ ಬಸ್​​ ಚಾಲಕರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದ ಬಿ.ಎಸ್​​. ತೋಟಗಿ ಅವರಿಗೆ ಇಂದು ಸಾರಿಗೆ ಇಲಾಖೆಯ ಸಿಬ್ಬಂದಿಗಳು ಆತ್ಮೀಯ ಬೀಳ್ಕೊಡುಗೆ ನೀಡಿದರು.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಕೇಂದ್ರ ಬಸ್​​ ನಿಲ್ದಾಣದ ವಾಯವ್ಯ ಕರ್ನಾಟಕ ಸಾರಿಗೆ ಘಟಕದಲ್ಲಿ ಸೇವೆ ಸಲ್ಲಿಸಿದ ಬಿ.ಎಸ್​​. ತೋಟಗಿ ಅವರು ತಾವು ಓಡಿಸುತ್ತಿದ್ದ ಬಸ್​ಗೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಬಳಿಕ ನಿವೃತ್ತಿ ಹೊಂದಿದರು.

ಚಾಲಕ ಬಿ.ಎಸ್​​. ತೋಟಗಿ ಅವರಿಗೆ ಸತ್ಕಾರ ಕಾರ್ಯಕ್ರಮ ಆಯೋಜಿಸಿದ್ದ ಇಲಾಖೆಯ ಸಿಬ್ಬಂದಿ ವಿಶೇಷ ರೀತಿಯಲ್ಲಿ ಬೀಳ್ಕೊಟ್ಟರು. ಈ ವೇಳೆ ಸಿಬ್ಬಂದಿ, ಬಂಧು-ಬಳಗದವರು, ಆತ್ಮೀಯರು ಬಂದು ತೋಟಗಿ ಮತ್ತು ಅವರ ಪತ್ನಿಗೆ ಹೂಗುಚ್ಚ ನೀಡಿ ಗೌರವಿಸಿದರು. ಕಾರ್ಯಕ್ರಮದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬೆನ್ನಲ್ಲೇ ಹಲವರು ಚಾಲಕ ಬಿ.ಎಸ್​​. ತೋಟಗಿ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net